ವೈದ್ಯರಿಗೆ ಥಳಿತ: ಪುತ್ರಿಯ ಅನುಚಿತ ವರ್ತನೆಗೆ ಕ್ಷಮೆಯಾಚಿಸಿದ ಮಿಜೋರಾಂ ಸಿಎಂ!

ವೈದ್ಯರೊಂದಿಗೆ ತಮ್ಮ ಮಗಳು ಮಿಲಾರಿ ಚಂಗ್ಟೆಯ 'ದುವರ್ತನೆ'ಗಾಗಿ ಮಿಜೋರಾಂ ಮುಖ್ಯಮಂತ್ರಿ ಝೊರಾಮ್ತಂಗ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಝೊರಾಮ್ತಂಗ
ಝೊರಾಮ್ತಂಗ

ಗುವಾಹಟಿ: ವೈದ್ಯರೊಂದಿಗೆ ತಮ್ಮ ಮಗಳು ಮಿಲಾರಿ ಚಂಗ್ಟೆಯ 'ದುವರ್ತನೆ'ಗಾಗಿ ಮಿಜೋರಾಂ ಮುಖ್ಯಮಂತ್ರಿ ಝೊರಾಮ್ತಂಗ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ವೈದ್ಯರ ಮೇಲೆ ಮಿಲಾರಿ ಹಲ್ಲೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ನಾಡಿನ ಜನತೆಯ ಕ್ಷಣೆಯಾಚಿಸಿರುವ ಸಿಎಂ, ನಾನು ನನ್ನ ಮಗಳ ಕೃತ್ಯವನ್ನು ಸಮರ್ಥಿಸುವುದಿಲ್ಲ ಹೇಳಿದ್ದಾರೆ.

ಐಜ್ವಾಲ್ ನ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಮೇಲೆ ಮಿಲಾರಿ ಚಂಗ್ಟೆ ಹಲ್ಲೆ ನಡೆಸಿದ್ದರು. ಚರ್ಮ ರೋಗ ವೈದ್ಯರೊಬ್ಬರ ಬಳಿ ತೆರಳಲು ಅನುಮತಿ ಪಡೆಯಲು ಮಿಲಾರಿ ಆಸ್ಪತ್ರೆಗೆ ಹೋಗಿದ್ದರು. ಬಾಗಿಲು ತೆರೆದು ಒಳಬಂದ ಮಿಲಾರಿ ವೈದ್ಯರ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಆಸ್ಪತ್ರೆಗೆ ಭೇಟಿ ನೀಡುವ ಮೊದಲು ಅಪಾಯಿಂಟ್‌ಮೆಂಟ್ ಪಡೆಯುವಂತೆ ವೈದ್ಯರು ಹೇಳಿದ್ದರಿಂದ ಸಿಎಂ ಪುತ್ರಿ ಕೋಪಗೊಂಡು ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ನಂತರ, ಆಕೆಯ ಹಿರಿಯ ಸಹೋದರ ರಾಮತಾನ್ಸಿಯಾಮಾ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆಯಾಚಿಸಿದ್ದಾರೆ. ಹಿಂದಿನ ರಾತ್ರಿ ಕೆಳಗೆ ಬಿದ್ದಿದ್ದರಿಂದ ಆಕೆಯ ಹಣೆಯ ಮೇಲೆ ಗಾಯಗಳಾಗಿದ್ದು ಇದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಿದರು.

ವೈದ್ಯರ ಮೇಲಿನ ಹಲ್ಲೆಯನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಮಿಜೋರಾಂನಲ್ಲಿ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com