ಅಮಿತ್ ಶಾಗೆ ಶೂ ತಂದುಕೊಟ್ಟ ತೆಲಂಗಾಣ ಬಿಜೆಪಿ ಅಧ್ಯಕ್ಷ: ವಿಡಿಯೋ ವೈರಲ್ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶೂಗಳನ್ನು ತಂದುಕೊಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮಿತ್ ಶಾಗೆ ಶೂ ತಂದುಕೊಟ್ಟ ತೆಲಂಗಾಣ ಬಿಜೆಪಿ ಅಧ್ಯಕ್ಷ
ಅಮಿತ್ ಶಾಗೆ ಶೂ ತಂದುಕೊಟ್ಟ ತೆಲಂಗಾಣ ಬಿಜೆಪಿ ಅಧ್ಯಕ್ಷ

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶೂಗಳನ್ನು ತಂದುಕೊಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್, ದೆಹಲಿಯ ಚಪ್ಪಲಿಗಳನ್ನು ಹೂರುವ ಗುಜರಾತಿ ಗುಲಾಮರನ್ನು ತೆಲಂಗಾಣ ಗಮನಿಸುತ್ತಿದೆ. ತೆಲಂಗಾಣದ ಸ್ವಾಭಿಮಾನ ಕೆಣಕುವ ಯಾವುದೇ ಪ್ರಯತ್ನವನ್ನು ಹಿಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ.

ಅಮಿತ್ ಶಾ ಸಿಕಂದರಾಬಾದ್ ನ ಉಜ್ಜೈನಿ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದರು ಆಗಿರುವ ಬಂಡಿ ಸಂಜಯ್ ಕುಮಾರ್, ದೇವಾಲಯದ ಹೊರಗಡೆ  ಬಿಡಲಾದ ಶೂ ಗಳನ್ನು ಅಮಿತ್ ಶಾಗೆ ತಂದುಕೊಡುವುದು ವಿಡಿಯೋದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com