ಲಸಿಕೆ ತೆಗೆದುಕೊಂಡ ಬಳಿಕವೂ ಕೇರಳದಲ್ಲಿ ಶಂಕಿತ ರೇಬಿಸ್ ಸೋಂಕಿನಿಂದ ಮಹಿಳೆ ಸಾವು

ಪೆರಂಬ್ರಾದಲ್ಲಿ 53 ವರ್ಷದ ಮಹಿಳೆಯೊಬ್ಬರು ಅಗತ್ಯ ಲಸಿಕೆಯನ್ನು ತೆಗೆದುಕೊಂಡರೂ ಕೂಡ ಶಂಕಿತ ರೇಬಿಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೋಯಿಕ್ಕೋಡ್: ಇಲ್ಲಿಗೆ ಸಮೀಪದ ಪೆರಂಬ್ರಾದಲ್ಲಿ 53 ವರ್ಷದ ಮಹಿಳೆಯೊಬ್ಬರು ಅಗತ್ಯ ಲಸಿಕೆಯನ್ನು ತೆಗೆದುಕೊಂಡರೂ ಕೂಡ ಶಂಕಿತ ರೇಬಿಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಜುಲೈ 21 ರಂದು ಪೆರಂಬ್ರಾದ ರಾಂಡೆಯಾರುವಿನ ಪಿ. ಚಂದ್ರಿಕಾ ಎಂಬ ಮಹಿಳೆಯ ಮುಖಕ್ಕೆ ನಾಯಿ ಕಚ್ಚಿತ್ತು. ಅದೇ ನಾಯಿ ಅದೇ ಪ್ರದೇಶದ ಇತರ ಏಳು ಮಂದಿಗೂ ಕಚ್ಚಿತ್ತು ಎಂದು ಮೂಲಗಳು ತಿಳಿಸಿವೆ.

ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆಕೆಯನ್ನು ಕಳೆದ ವಾರದ ಆರಂಭದಲ್ಲಿ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಮಧ್ಯರಾತ್ರಿ ಆಕೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಿಕಾ ಅವರು ರೇಬೀಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದು ಅವರಿಂದ ಸಂಗ್ರಹಿಸಿದ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ವೈದ್ಯಕೀಯ ಕಾಲೇಜು ಮೂಲಗಳು ತಿಳಿಸಿವೆ.

ಈ ವರ್ಷದ ಜೂನ್‌ನಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, ರೇಬಿಸ್ ಸೋಂಕಿಗೆ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಾಲಕ್ಕಾಡ್ ಜಿಲ್ಲೆಯ ಮಂಕರ ಮೂಲದ ಶ್ರೀಲಕ್ಷ್ಮಿ (19) ಅವರು ನಾಲ್ಕು ಸುತ್ತಿನ ಅಗತ್ಯ ಲಸಿಕೆಗಳನ್ನು ಪಡೆದ ಬಳಿಕವೂ ರೇಬಿಸ್‌ ಸೋಂಕಿನಿಂದ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com