ಪಿಎಸ್ ಯು ಗಳ ಕಾರ್ಯನಿರ್ವಹಿಸದ 17 ಗಣಿಗಳು ಹರಾಜಿಗೆ

ಸಾರ್ವಜನಿಕ ವಲಯದ ಉದ್ಯಮಗಳು ವಾಪಸ್ ನೀಡಿರುವ 17 ಗಣಿಗಳನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನೀಡಿದೆ. ಈ 17 ಗಣಿಗಳು ಸದ್ಯಕ್ಕೆ ಕಾರ್ಯನಿರ್ವಹಿಸದ ಗಣಿಗಳಾಗಿವೆ ಎಂದು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 
ಕಲ್ಲಿದ್ದಲು ಗಣಿ (ಸಂಗ್ರಹ ಚಿತ್ರ)
ಕಲ್ಲಿದ್ದಲು ಗಣಿ (ಸಂಗ್ರಹ ಚಿತ್ರ)

ನವದೆಹಲಿ: ಸಾರ್ವಜನಿಕ ವಲಯದ ಉದ್ಯಮಗಳು ವಾಪಸ್ ನೀಡಿರುವ 17 ಗಣಿಗಳನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನೀಡಿದೆ. ಈ 17 ಗಣಿಗಳು ಸದ್ಯಕ್ಕೆ ಕಾರ್ಯನಿರ್ವಹಿಸದ ಗಣಿಗಳಾಗಿವೆ ಎಂದು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ವಿವಿಧ ಕ್ಷೇತ್ರಗಳಿಗೆ ಇಂಧನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ದೇಶಿಯವಾಗಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ವಹಿಸಿರುವ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

"ಭಾನುವಾರದಂದು 17 ಬ್ಲಾಕ್ ಗಳು ಸರ್ಕಾರಕ್ಕೆ ವಾಪಸ್ ಬಂದಿವೆ, ಅವು ಉತ್ತಮವಾಗಿದ್ದು, ಈಗ ಹರಾಜು ಹಾಕಲು ಇಡುತ್ತಿದ್ದೇವೆ" ಎಂದು ಜೋಶಿ ಹೇಳಿದ್ದಾರೆ.

ಎನ್ ಎಂ ಡಿಸಿ ಹಗೂ ಎಫ್ಐಸಿಸಿಐ ಆಯೋಜಿಸಿದ್ದ ಭಾರತೀಯ ಖನಿಜಗಳು ಮತ್ತು ಲೋಹಗಳ ಉದ್ಯಮದ ವಿಷಯದ ಕುರಿತ ಸಮ್ಮೇಳನದಲ್ಲಿ ಜೋಶಿ ಮಾತನಾಡುತ್ತಿದ್ದರು, ಕಲ್ಲಿದ್ದಲು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾರ್ವಕನಿಕ ವಲಯದ ಉದ್ಯಮಗಳಿಗೆ ದೊಡ್ಡ ಗಣಿಗಳನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

10-15 ವರ್ಷಗಳ ನಂತರವೂ ಕಾರ್ಯನಿರ್ವಹಣೆ ಮಾಡದ ಗಣಿಗಳನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ, ಈ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಜೋಶಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com