"ಬಾಳಾ ಸಾಹೇಬರ ಹೆಸರಿನಲ್ಲಿ ಯಾಕೆ ಮತ ಕೇಳುತ್ತಿದ್ದೀರಿ? ಮುಗಿಯಿತಾ ನಿಮ್ಮ ಮೋದಿ ಯುಗ?: ಶಿವಸೇನೆ

ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ "ಕನಸು" ನನಸಾಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಯು ಮರಾಠಿ ಏಕತೆಯನ್ನು ಮುರಿಯುವ ತಂತ್ರ ಎಂದು ಮಂಗಳವಾರ...
ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ

ಪುಣೆ: ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ "ಕನಸು" ನನಸಾಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಯು ಮರಾಠಿ ಏಕತೆಯನ್ನು ಮುರಿಯುವ ತಂತ್ರ ಎಂದು ಮಂಗಳವಾರ ಶಿವಸೇನೆ ಟೀಕಿಸಿದೆ.

ಸದ್ಯದಲ್ಲೇ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, "ಬಾಳಾಸಾಹೇಬರ ಹೆಸರಿನಲ್ಲಿ ಯಾಕೆ ಮತ ಕೇಳುತ್ತಿದ್ದೀರಿ? ನಿಮ್ಮ ಮೋದಿ ಯುಗ, ಮೋದಿ ಅಲೆ ಕಡಿಮೆಯಾಗುತ್ತಿದೆಯೇ?" ಎಂದು ಶಿವಸೇನಾ ಮುಖವಾಣಿ 'ಸಾಮ್ನಾ' ಸಂಪಾದಕೀಯ ಪ್ರಶ್ನಿಸಿದೆ.

ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಂತಹ ನಾಯಕರು ಈಗ ಬಾಳಾಸಾಹೇಬರ ಕನಸನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ 2014 ರಲ್ಲಿ ಪಕ್ಷದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವಾಗ ದಿವಂಗತ ಶಿವಸೇನಾ ಮುಖ್ಯಸ್ಥರನ್ನು ಅವರು ನೆನಪಿಸಿಕೊಳ್ಳಲಿಲ್ಲ ಎಂದು ಸಂಪಾದಕೀಯ ಹೇಳಿದೆ.

"ಫಡ್ನವೀಸ್ ಅವರ ಮಾತುಗಳು ನರಿಯ ವಂಚನೆಯ ಆಹ್ವಾನದಂತಿದ್ದು, ಮುಂಬೈ ಮತ್ತು ಥಾಣೆ ಜನರು ಜಾಗರೂಕರಾಗಿರಬೇಕು" ಎಂದು ಮರಾಠಿ ದಿನಪತ್ರಿಕೆ ಎಚ್ಚರಿಕೆ ನೀಡಿದೆ.

ಬಿಜೆಪಿಯವರು ಬಳಸುತ್ತಿರುವ ‘ಬಾಳಾಸಾಹೇಬರ ಕನಸಿನ’ ಭಾಷೆ ಮುಂಬೈನಲ್ಲಿ ಮರಾಠಿ ಒಗ್ಗಟ್ಟನ್ನು ಮುರಿಯುವ ತಂತ್ರವಲ್ಲದೆ ಮತ್ತೇನಲ್ಲ ಮತ್ತು ಅದಕ್ಕಾಗಿ ಅವರು ಶಿವಸೇನೆಗೆ ಹಾನಿ ಮಾಡುತ್ತಿದ್ದಾರೆ. ನಾವು ಹಿಂದೂತ್ವವಾದಿಗಳು. ಆದರೆ ಬಿಜೆಪಿಯ ಗುಲಾಮರಲ್ಲ” ಎಂದು ಸಾಮ್ನಾ ಪ್ರತಿಪಾದಿಸಿದೆ.

ಈ ವರ್ಷದ ಜೂನ್‌ನಲ್ಲಿ, ಶಿವಸೇನಾ ಶಾಸಕ ಏಕನಾಥ್ ಶಿಂಧೆ ಮತ್ತು ಇತರ 39 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದ ಪರಿಣಾಮ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನವಾಯಿತು. 

ನಂತರ ಜೂನ್ 30 ರಂದು ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕ ಫಡ್ನವೀಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com