ಬಿಹಾರ: ಮುಸ್ಲಿಂ ಸಚಿವರ ಭೇಟಿ, ದೇವಾಲಯ ಶುದ್ಧೀಕರಿಸಿದ ಬಿಜೆಪಿ!

 ಬಿಹಾರದ ನೂತನ ಸರ್ಕಾರದ ಹಿಂದೂಯೇತರ ಸಚಿವರೊಬ್ಬರು ಗರ್ಭಗುಡಿ ಪ್ರವೇಶ ವಿವಾದದ ನಡುವೆ ಬಿಜೆಪಿ ಗಯಾ ಜಿಲ್ಲಾ ಘಟಕವು ಇಲ್ಲಿನ ವಿಷ್ಣುಪಾದ್ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಸಿದೆ. 
ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮುಸ್ಲಿಂ ಸಚಿವ ಮನ್ಸೂರಿ
ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮುಸ್ಲಿಂ ಸಚಿವ ಮನ್ಸೂರಿ

ಪಾಟ್ನಾ:  ಬಿಹಾರದ ನೂತನ ಸರ್ಕಾರದ ಹಿಂದೂಯೇತರ ಸಚಿವರೊಬ್ಬರು ಗರ್ಭಗುಡಿ ಪ್ರವೇಶ ವಿವಾದದ ನಡುವೆ ಬಿಜೆಪಿ ಗಯಾ ಜಿಲ್ಲಾ ಘಟಕವು ಇಲ್ಲಿನ ವಿಷ್ಣುಪಾದ್ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಸಿದೆ.  ಫಲ್ಗು ನದಿಯಿಂದ ನೀರು ತಂದು ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಆವರಣದಲ್ಲಿ ಶುದ್ಧೀಕರಣ’ ನಡೆಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಧನರಾಜ್ ಶರ್ಮಾ ತಿಳಿಸಿದ್ದಾರೆ.

ಬುಧವಾರ ಪಾಂಡ ಸಮಾಜದವರು ಫಲ್ಗು ನದಿಯ ನೀರಿನಿಂದ ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛಗೊಳಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಗಯಾಗೆ ಭೇಟಿ ನೀಡಿದ್ದ ವೇಳೆ ಅವರೊಂದಿಗೆ ಬಿಹಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಅವರು ವಿಷ್ಣುಪಾದ್ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ನಂತರ ವಿವಾದ ಭುಗಿಲೆದ್ದಿತು. ಹಿಂದೂಯೇತರ ಸಚಿವj ಪ್ರವೇಶ ಉದ್ದೇಶಪೂರ್ವಕವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಶರ್ಮಾ ಆರೋಪಿಸಿದ್ದಾರೆ.

ದೇವಸ್ಥಾನದ ಗೋಡೆಯ ಹೊರಗೆ ಹಿಂದೂಯೇತರರಿಗೆ ಪ್ರವೇಶ ನೀಡುವುದಿಲ್ಲ ಎಂದು ಸೂಚನೆ ನೀಡಿದ್ದರೂ ಸಚಿವರು ಒಳಗೆ ಹೋಗಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್, ಮನ್ಸೂರಿ ಮತ್ತು ಇತರ ನಾಲ್ವರ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಸೋಮವಾರ ಮುಜಾಫರ್‌ಪುರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಸಿಎಂ ನಿತೀಶ್ ಕುಮಾರ್ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ, ಹಿಂದೂ ಸಮಾಜ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ದನರಾಜ್ ಶರ್ಮಾ  ಹೇಳಿದ್ದಾರೆ. ನಿತೀಶ್ ಕುಮಾರ್ ಅವರ ರಾಜಕೀಯ ಅಂತ್ಯ ಹತ್ತಿರದಲ್ಲಿದೆ. ಇದೆಲ್ಲದರಿಂದ ಇಂದು ನಾವು ಶುದ್ಧೀಕರಣ ಪೂಜೆಯನ್ನು ಮಾಡಿದ್ದೇವೆ ಎಂದು ಶರ್ಮಾ ಎಎನ್ ಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com