ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ?: ಶಿವಸೇನೆ 

ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿರುವುದನ್ನು ಶಿವಸೇನೆ ಪ್ರಶ್ನಿಸಿದ್ದು, ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸನ್ಮಾನ ಮಾಡಿರುವುದನ್ನು ಹಿಂದೂ ಸಂಸ್ಕೃತಿಯೇ? ಎಂದು ಕೇಳಿದೆ.
ಶಿವಸೇನೆ
ಶಿವಸೇನೆ

ಮುಂಬೈ: ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿರುವುದನ್ನು ಶಿವಸೇನೆ ಪ್ರಶ್ನಿಸಿದ್ದು, ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸನ್ಮಾನ ಮಾಡಿರುವುದನ್ನು ಹಿಂದೂ ಸಂಸ್ಕೃತಿಯೇ? ಎಂದು ಕೇಳಿದೆ.

ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನೂ ಶಿವಸೇನೆ ಪ್ರಶ್ನಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿದೆ. 

2022 ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಬಿದ್ದಾಗ 5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಆಕೆಯ ಮೂರು ವರ್ಷದ ಮಗಳು ಹತ್ಯೆಗೊಳಗಾದ 7 ಮಂದಿಯ ಪೈಕಿ ಇದ್ದರು. ಆ.15 ರಂದು ಗೋಧ್ರಾ ಉಪಜೈಲಿನಿಂದ 11 ಮಂದಿ ಆರೋಪಿಗಳು ಬಿಡುಗಡೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com