ಅವಳಿ ಕಟ್ಟಡ ನಾಶ ಕಾರ್ಯಾಚರಣೆಯಲ್ಲಿ ಬೇರೆ ಕಟ್ಟಡಗಳಿಗೆ ಹಾನಿಯಾಗಿಲ್ಲ; ಅಧಿಕಾರಿಗಳ ಸ್ಪಷ್ಟನೆ
ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ, ಅಕ್ಕ-ಪಕ್ಕದಲ್ಲಿದ್ದ ಯಾವುದೇ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Published: 28th August 2022 09:35 PM | Last Updated: 29th August 2022 01:33 PM | A+A A-

ಅವಳಿ ಕಟ್ಟಡ
ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ, ಅಕ್ಕ-ಪಕ್ಕದಲ್ಲಿದ್ದ ಯಾವುದೇ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೇಲ್ನೋಟಕ್ಕೆ ಬೇರೆ ಯಾವುದೇ ಕಟ್ಟಡಗಳಿಗೆ ಹಾನಿಯಾಗಿಲ್ಲ, ವಿಸ್ತೃತವಾದ ಆಡಿಟ್ ನಂತರ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ನೋಯ್ಡಾದ ಅವಳಿ ಗೋಪುರ ನೆಲಸಮ: 500 ಕೋಟಿ ನಷ್ಟವಾಗಿದೆ ಎಂದ ಸೂಪರ್‌ಟೆಕ್ ಕಂಪನಿ
ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳನ್ನು ಭಾನುವಾರ ಮಧ್ಯಾಹ್ನ 2.30ಕ್ಕೆ ಸ್ಫೋಟಕಗಳನ್ನು ಬಳಸಿ ನೆಲಕ್ಕುರುಳಿಸಲಾಯಿತು.