ಕೊಡಗು ಪೊಲೀಸರಿಂದ 10 ಲಕ್ಷ ರೂಪಾಯಿ ಮೌಲ್ಯದ ಹಶೀಶ್ ವಶಕ್ಕೆ

ಕೊಡಗು ಪೊಲೀಸರು 10 ಲಕ್ಷ ರೂಪಾಯಿ ಮೌಲ್ಯದ ಹ್ಯಾಶಿಶ್ ಅನ್ನು ವಶಕ್ಕೆ ಪಡೆದಿದ್ದಾರೆ. 
ಬಂಧನ
ಬಂಧನ

ಕೊಡಗು: ಕೊಡಗು ಪೊಲೀಸರು 10 ಲಕ್ಷ ರೂಪಾಯಿ ಮೌಲ್ಯದ ಹಶೀಶ್ ಅನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಡ್ರಗ್ ಪೆಡ್ಲರ್ ಗಳಿಂದ  ಹಶೀಶ್ ನ್ನು ವಶಪಡಿಸಿಕೊಳ್ಳಲಾಗಿದ್ದು, ಕರಿಕೆ-ಕೇರಳ ಗಡಿಯಲ್ಲಿ 1.16 ಕಿಲೋ ನಷ್ಟು ಡ್ರಗ್ ನ್ನು ಆರೋಪಿಗಳು ಹೊಂದಿದ್ದರು.
 
ಮಡಿಕೇರಿಯಲ್ಲಿ ಈ ಘಟನೆ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್ ಪಿ ಎಂ.ಎ ಅಯ್ಯಪ್ಪ, ಕರಿಕೆ ಗಡಿಯಲ್ಲಿ ಎಂದಿನಂತೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದಾಗ ಡ್ರಗ್ಸ್ ಸಾಗಿಸುತ್ತಿದ್ದ ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. 

ಕಾಸರಗೋಡು ಜಿಲ್ಲೆಯ ಅಜ್ಮದ್ ಕಬೀರ್ (37), ಅಬ್ದುಲ್ ಖಾದರ್ (27) ಹಾಗೂ ಮೊಹಮ್ಮದ್ ಮುಜ್ಮಿಲ್ (22) ಬಂಧಿತ ಆರೋಪಿಗಳಾಗಿದ್ದಾರೆ. 

ಆರೋಪಿಗಳು ಹ್ಯಾಶಿಶ್ ನ್ನು ಕೊಡಗಿನಲ್ಲಿದ್ದ ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಪೈಕಿ ಅಹ್ಮದ್ ಕಬೀರ್ ಎಂಬಾತ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಹಾಗೂ ಕೇರಳ ಜಿಲ್ಲೆಯ ಬೇಕಲ್ ಪೊಲೀಸ್ ಠಾಣೆಯಲ್ಲಿ ಬಾಕಿ ಪ್ರಕರಣಗಳನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com