ಉತ್ತರ ಪ್ರದೇಶ: ಜೈಲಿನಲ್ಲೇ ವಿಷಯುಕ್ತ ಪದಾರ್ಥ ಸೇವಿಸಿದ ದಂಪತಿ; ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ
ಬಲ್ಲಿಯಾ ಜಿಲ್ಲಾ ಕಾರಾಗೃಹದಲ್ಲಿ ವಿಷಕಾರಿ ಪದಾರ್ಥ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಜೈಲಿನಲ್ಲಿದ್ದ ಆಕೆಯ ಪತಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Published: 01st December 2022 11:22 AM | Last Updated: 01st December 2022 02:11 PM | A+A A-

ಸಾಂದರ್ಭಿಕ ಚಿತ್ರ
ಬಲ್ಲಿಯಾ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಷಕಾರಿ ಪದಾರ್ಥ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಜೈಲಿನಲ್ಲಿದ್ದ ಆಕೆಯ ಪತಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನೀಲಂ ಸಾಹ್ನಿ (23) ಬುಧವಾರ ಜೈಲಿನಲ್ಲಿದ್ದ ತನ್ನ ಪತಿ ಸೂರಜ್ ಸಾಹ್ನಿ (25) ಅವರನ್ನು ಭೇಟಿಯಾಗಲು ಹೋಗಿದ್ದಾಗ ಈ ಘಟನೆ ನಡೆದಿದ್ದು, ಇಬ್ಬರೂ ವಿಷಪೂರಿತ ಬಿಸ್ಕೆಟ್‌ಗಳನ್ನು ಸೇವಿಸಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಪ್ರವೀಣ್ ಸಿಂಗ್ ತಿಳಿಸಿದ್ದಾರೆ.
ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ನೀಲಂ ಮೃತಪಟ್ಟಿದ್ದು, ಸೂರಜ್ ಸ್ಥಿತಿ ಗಂಭೀರವಾಗಿದ್ದರಿಂದ ಉತ್ತಮ ಚಿಕಿತ್ಸೆಗಾಗಿ ವಾರಣಾಸಿಗೆ ರವಾನಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಬನ್ಸ್‌ದೀಹ್ ಪ್ರದೇಶದ ದುಮ್ರಿ ಗ್ರಾಮದ ನಿವಾಸಿ ಸೂರಜ್ ಸಣ್ಣ ವಿವಾದವೊಂದಕ್ಕೆ ತನ್ನ ಸೋದರಸಂಬಂಧಿಯನ್ನು ಕೊಂದಿದ್ದರು. ಹೀಗಾಗಿ ಅವರನ್ನು 2021ರ ಜೂನ್ 7ರಂದು ಬಂಧಿಸಲಾಗಿತ್ತು. ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು.