ಉಜ್ಜಯಿನಿ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಮೊಬೈಲ್ ಲೈಬ್ರರಿ ಸ್ಥಾಪನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಟ್ರಕ್‌ನಲ್ಲಿ ರಾಜಕೀಯ, ಇತಿಹಾಸ ಮತ್ತು ಖ್ಯಾತ ನಾಯಕರ ಜೀವನವನ್ನೊಳಗೊಂಡ ವಿಷಯಗಳ ಕುರಿತು ಪುಸ್ತಕಗಳನ್ನು ಒಳಗೊಂಡಿರುವ ಮೊಬೈಲ್ 'ಭಾರತ್ ಜೋಡೋ ಲೈಬ್ರರಿ'ಯನ್ನು ಸ್ಥಾಪಿಸಲಾಗಿದೆ.
Published: 01st December 2022 12:48 PM | Last Updated: 01st December 2022 02:14 PM | A+A A-

ಭಾರತ್ ಜೋಡೋ ಯಾತ್ರೆ
ಉಜ್ಜಯಿನಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಟ್ರಕ್‌ನಲ್ಲಿ ರಾಜಕೀಯ, ಇತಿಹಾಸ ಮತ್ತು ಖ್ಯಾತ ನಾಯಕರ ಜೀವನವನ್ನೊಳಗೊಂಡ ವಿಷಯಗಳ ಕುರಿತು ಪುಸ್ತಕಗಳನ್ನು ಒಳಗೊಂಡಿರುವ ಮೊಬೈಲ್ 'ಭಾರತ್ ಜೋಡೋ ಲೈಬ್ರರಿ'ಯನ್ನು ಸ್ಥಾಪಿಸಲಾಗಿದೆ.
ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಓದಲು ಬಯಸುವವರಿಗೆ ಅವಕಾಶ ನೀಡಲು ಸುಮಾರು 1,000 ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಸೌಲಭ್ಯವನ್ನು ಸ್ಥಾಪಿಸಲಾಗಿದೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಕಾನೂನು ನೆರವು ಸಂಯೋಜಕಿ ಅವನಿ ಬನ್ಸಾಲ್ ಉಜ್ಜಯಿನಿಯಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಭಾರತದ ಕಲ್ಪನೆಯನ್ನು ಜನರ ಜೀವನದಲ್ಲಿ ಶಾಶ್ವತ ವಿಷಯವನ್ನಾಗಿ ಮಾಡುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಗ್ರಂಥಾಲಯವು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ, ಗುರುವಾರ ಮಧ್ಯ ಪ್ರದೇಶದ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಇದನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಯಾತ್ರೆಯ ನಂತರ ಕಾಂಗ್ರೆಸ್ ದೇಶದಾದ್ಯಂತ 500 ಭಾರತ್ ಜೋಡೋ ಗ್ರಂಥಾಲಯಗಳನ್ನು ಸ್ಥಾಪಿಸಲಿದೆ. ಓದುಗರ ಅನುಕೂಲಕ್ಕಾಗಿ ಪುಸ್ತಕದ ಕಪಾಟಿನ ಬಳಿ ಸಣ್ಣ ಟೇಬಲ್‌ಗಳ ಜೊತೆಗೆ ಎರಡು ಸೆಟ್ ಸೋಫಾಗಳನ್ನು ಸಹ ಇರಿಸಲಾಗಿದೆ ಎಂದು ಬನ್ಸಾಲ್ ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಟಿ ಸ್ವರಾ ಭಾಸ್ಕರ್
ಟ್ರಕ್‌ನಲ್ಲಿ ಸ್ಥಾಪಿಸಲಾಗಿರುವ ಲೈಬ್ರರಿಯು ರಾಜಕೀಯ, ಇತಿಹಾಸ, ಆಧ್ಯಾತ್ಮಿಕತೆ, ಕಾಲ್ಪನಿಕ ಕಥೆಗಳು ಮತ್ತು ಮಹಾನ್ ನಾಯಕರ ಆತ್ಮಚರಿತ್ರೆಯಂತಹ ವಿಷಯಗಳ ಪುಸ್ತಕಗಳನ್ನು ಒಳಗೊಂಡಿರುವ ವಿವಿಧ ವಿಭಾಗಗಳನ್ನು ಹೊಂದಿದೆ.
ಗ್ರಂಥಾಲಯದ ಮುಂಭಾಗದ ಗೋಡೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾವಚಿತ್ರವನ್ನು ಅಂಟಿಸಲಾಗಿದೆ ಮತ್ತು ಪಕ್ಕದ ಫಲಕವು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಚಿತ್ರವನ್ನು ಪ್ರದರ್ಶಿಸುತ್ತದೆ.
ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಜೀವನದ ಕುರಿತಾದ ಪುಸ್ತಕಗಳಿಗೂ ಗ್ರಂಥಾಲಯದಲ್ಲಿ ಪ್ರಮುಖ ಸ್ಥಳವನ್ನು ನೀಡಲಾಗಿದೆ.
'ಇಂತಹ ಸೌಲಭ್ಯದ ಅಗತ್ಯವನ್ನು ಮನಗಂಡ ಯಾತ್ರೆಯಲ್ಲಿ ಭಾಗವಹಿಸಿರುವ 17 ಜನರ ತಂಡವು ಸಂಚಾರಿ ಗ್ರಂಥಾಲಯವನ್ನು ಸ್ಥಾಪಿಸಿದೆ. ಜ್ಞಾನವನ್ನು ಪಡೆಯಲು ಎಲ್ಲಾ ರಾಜಕೀಯ ಕಾರ್ಯಕರ್ತರು ಓದಬೇಕಾದ ಪುಸ್ತಕಗಳ ಸಂಗ್ರಹವಿದೆ' ಎಂದು ಅವರು ಹೇಳಿದರು.