ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಅಮರಿಂದರ್ ಸಿಂಗ್, ಜಾಖರ್ ನೇಮಕ
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮಾಜಿ ನಾಯಕರಾದ ಅಮರಿಂದರ್ ಸಿಂಗ್ ಹಾಗೂ ಸುನಿಲ್ ಜಾಖರ್ ಅವರಿಗೆ ಬಿಜೆಪಿ ಬಡ್ತಿ ನೀಡಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಶುಕ್ರವಾರ ನೇಮಕ ಮಾಡಿದೆ.
Published: 02nd December 2022 03:54 PM | Last Updated: 02nd December 2022 03:54 PM | A+A A-

ಕ್ಯಾಪ್ಟನ್ ಅಮರಿಂದರ್ ಸಿಂಗ್
ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮಾಜಿ ನಾಯಕರಾದ ಅಮರಿಂದರ್ ಸಿಂಗ್ ಹಾಗೂ ಸುನಿಲ್ ಜಾಖರ್ ಅವರಿಗೆ ಬಿಜೆಪಿ ಬಡ್ತಿ ನೀಡಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಶುಕ್ರವಾರ ನೇಮಕ ಮಾಡಿದೆ.
ಅಮರಿಂದರ್ ಸಿಂಗ್, ಜಾಖರ್ ಹಾಗೂ ಉತ್ತರ ಪ್ರದೇಶ ಮಾಜಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಕ ಮಾಡಲಾಗಿದೆ. ಅಲ್ಲದೆ ಮಾಜಿ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಕಾಂಗ್ರೆಸ್ ನಿಂದ ಹೊರ ನಡೆದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಜೈವೀರ್ ಶೇರ್ಗಿಲ್ ನೇಮಕ
ಉತ್ತರಾಖಂಡ ಮಾಜಿ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್, ಛತ್ತೀಸ್‌ಗಢದ ಮಾಜಿ ಅಧ್ಯಕ್ಷ ವಿಷ್ಣು ದೇವ್ ಸಾಯಿ, ರಾಣಾ ಗುರ್ಮಿತ್ ಸಿಂಗ್ ಸೋಧಿ, ಮನೋರಂಜನ್ ಕಾಲಿಯಾ ಮತ್ತು ಪಂಜಾಬ್‌ನ ಅಮನ್‌ಜೋತ್ ಕೌರ್ ರಾಮೂವಾಲಿಯಾ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ವಿಶೇಷ ಆಹ್ವಾನಿತರನ್ನಾಗಿ ಮಾಡಲಾಗಿದೆ.