ಸೇಡಿನ ಜ್ವಾಲೆ: ಮಾಲ್ ನೌಕರಳ ಹತ್ಯೆ, ತಾನೇ ಸತ್ತಿದ್ದೇನೆಂದು ನಂಬಿಸಲು ಸತ್ತವಳ ಮುಖ ವಿರೂಪಗೊಳಿಸಿದ ಮಹಿಳೆ!
ಇತ್ತೀಚಿನ ದಿನಗಳಲ್ಲಿ ಭೀಕರ ಹತ್ಯೆಗಳು ಅದನ್ನು ಮುಚ್ಚಿಡಲು ವಿವಿಧ ರೀತಿಯ ಹೊಸ ಮಾರ್ಗಗಳನ್ನು ಅನುಸರಿಸುತ್ತಿರುವುದು ಹೆಚ್ಚು ವರದಿಯಾಗುತ್ತಿದೆ. ಶ್ರದ್ಧಾ ಪ್ರಕರಣ, ರಾಜ್ಯದಲ್ಲಿ ಅನೇಕ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಅಂಥಹದ್ದೇ ಒಂದು ಪ್ರಕರಣ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
Published: 02nd December 2022 10:16 PM | Last Updated: 03rd December 2022 05:00 PM | A+A A-

ಆರೋಪಿ ಪಾಯಲ್ ಭಾಟಿ
ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಭೀಕರ ಹತ್ಯೆಗಳು ಅದನ್ನು ಮುಚ್ಚಿಡಲು ವಿವಿಧ ರೀತಿಯ ಹೊಸ ಮಾರ್ಗಗಳನ್ನು ಅನುಸರಿಸುತ್ತಿರುವುದು ಹೆಚ್ಚು ವರದಿಯಾಗುತ್ತಿದೆ. ಶ್ರದ್ಧಾ ಪ್ರಕರಣ, ರಾಜ್ಯದಲ್ಲಿ ಅನೇಕ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಅಂಥಹದ್ದೇ ಒಂದು ಪ್ರಕರಣ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ವ್ಯಕ್ತಿಯೋರ್ವಳನ್ನು ಹತ್ಯೆ ಮಾಡಿದ್ದಾಳೆ. ಆದರೆ ಸಾವನ್ನಪ್ಪಿರುವುದು ತಾನೇ ಎಂದು ನಂಬಿಸುವುದಕ್ಕೆ ಹತ್ಯೆಗೀಡಾದ ವ್ಯಕ್ತಿಯ ಮುಖವನ್ನು ವಿರೂಪಗೊಳಿಸಿದ್ದಾಳೆ
ಮೂಲತಃ ತನ್ನ ಪೋಷಕರ ಆತ್ಮಹತ್ಯೆಗೆ ಸಂಬಂಧಿಕರನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಳ್ಳುವುದು ಈ ಮಹಿಳೆಯ ಉದ್ದೇಶವಾಗಿತ್ತು. ಆದರೆ ಇದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ಖತರ್ನಾಕ್ ಐಡಿಯಾವನ್ನು. ಅದೇನೆಂದರೆ ಮೊದಲು ತಾನೇ ಸತ್ತಿದ್ದೇನೆಂದು ನಂಬಿಸುವುದು ಆ ಬಳಿಕ ತನ್ನ ಸಂಬಂಧಿಕರನ್ನು ಹತ್ಯೆ ಮಾಡುವುದಾಗಿತ್ತು.
ತನ್ನ ಪ್ರೇಮಿಯೊಂದಿಗೆ ಸೇರಿದ ಗ್ರೇಟರ್ ನೋಯ್ಡಾದ ಮಹಿಳೆ ಮಾಲ್ ನೌಕರಳ ಹತ್ಯೆ ಮಾಡಿ ಕುದಿಯುವ ಎಣ್ಣೆಯನ್ನು ಆ ಮೃತ ದೇಹದ ಮೇಲೆ ಎರೆಚಿ ವಿರೂಪಗೊಳಿಸಿದ್ದಾಳೆ.
ಆರೋಪಿ ಪಾಯಲ್ ಭಾಟಿಯ ಮನೆಯಲ್ಲೇ ಈ ಮುಖ ವಿರೂಪಗೊಂಡ ವ್ಯಕ್ತಿಯ ಶವವೂ ಪತ್ತೆಯಾಗಿದೆ. ಈ ಶವದೊಂದಿಗೆ ಆಕೆ ತನ್ನ ಹೆಸರಿನಲ್ಲಿ ತಾನೇ ಆತ್ಮಹತ್ಯೆ ಪತ್ರ ಬರೆದು, ಸಹಿ ಹಾಕಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ ವ್ಯಕ್ತಿ
ಸುಡುತ್ತಿರುವ ಸಾಸಿವೆ ಎಣ್ಣೆಯನ್ನು ಶವದ ಮೇಲೆ ಹಾಕಿದ್ದು, ಅಚಾನಕ್ ಆಗಿ ಈ ಘಟನೆ ನಡೆದಿದೆ ಎಂಬಂತೆ ನಂಬಿಸಲು ಯತ್ನಿಸಿದ್ದಾಳೆ. ಕುದಿಯುವ ಎಣ್ಣೆ ಮುಖದ ಮೇಲೆ ಸಿಡಿದಿದ್ದು, ಜಗತ್ತಿ ಈ ವಿರೂಪಗೊಂಡ ಮುಖದೊಂದಿಗೆ ನನ್ನನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಪತ್ರ ಬರೆದು ಅದಕ್ಕೆ ಸಹಿ ಹಾಕಿ ಮಾಲ್ ನೌಕರಳ ಶವದ ಪಕ್ಕದಲ್ಲಿರಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು 28 ವರ್ಷದ ಹೇಮ ಚೌಧರಿ ಎಂದು ಗುರುತಿಸಲಾಗಿದ್ದು, ಈತ ಮಾಲ್ ನೌಕರಳಾಗಿದ್ದಳು ಹಾಗೂ ತನ್ನ ಮಗುವಿನೊಂದಿಗೆ ಅಕ್ಕನ ಮನೆಯಲ್ಲಿ ಜೀವಿಸುತ್ತಿದ್ದಳು.
ಪಾಯಲ್ ಹಾಗೂ ಆಕೆಯ ಪ್ರೇಮಿ ಅಜಯ್ ಠಾಕೂರ್ (27) ನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಶಾಪಿಂಗ್ ಮಾಲ್ ಗೆ ತೆರಳಿದ್ದರು. ಆಕೆ ತನ್ನ ದೇಹವನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ನೋಡಿ, ಹತ್ಯೆಗೆ ಸಂಚು ರೂಪಿಸಿದಳು.
ಹೇಮಾ ಚೌಧರಿ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಆಕೆಯ ಕುಟುಂಬ ಸದಸ್ಯರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಠಾಕೂರ್ ಚೌಧರಿಯೊಂದಿಗೆ ಸ್ನೇಹ ಸಂಪಾದಿಸಿ ಆಕೆಯನ್ನು ತನ್ನ ಪ್ರೇಯಸಿ ಭಾಟಿಯ ಮನೆಗೆ ಕರೆದುತಂದಿದ್ದ. ಅಲ್ಲಿ ಚೌಧರಿಯನ್ನು ಕೊಂದು ಈ ನಾಟಕವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ