ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣದ ಆರೋಪಿ, ಭಯೋತ್ಪಾದಕ ಹರ್ಪ್ರೀತ್ ಸಿಂಗ್ ಬಂಧನ
ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಹಾಗೂ ಉಗ್ರ ಹರ್ಪ್ರೀತ್ ಸಿಂಗ್'ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
Published: 02nd December 2022 09:00 AM | Last Updated: 02nd December 2022 01:58 PM | A+A A-

ಹರ್ಪ್ರೀತ್ ಸಿಂಗ್
ನವದೆಹಲಿ: ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಹಾಗೂ ಉಗ್ರ ಹರ್ಪ್ರೀತ್ ಸಿಂಗ್'ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಸ್ಫೋಟ ಘಟನೆ ಬಳಿಕ ಹರ್ಪ್ರೀತ್ ಸಿಂಗ್ ತಲೆ ಮರೆಸಿಕೊಂಡಿತ್ತ. ಈತ ಮಲೇಷ್ಯಾದ ಕೌಲಾಲಂಪುರ್‌ನಿಂದ ದೇಶಕ್ಕೆ ಕಾಲಿಡುತ್ತಿದ್ದಂತೆಯೇ ದೆಹಲಿ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹರ್‌ಪ್ರೀತ್ ಸಿಂಗ್ ಆಗಿದ್ದನು. ಹರ್‌ಪ್ರೀತ್ ಸಿಂಗ್ ಪಾಕಿಸ್ತಾನ ಮೂಲದ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಅವರ ಸಹವರ್ತಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
ಇದನ್ನೂ ಓದಿ: ಲೂಧಿಯಾನದಲ್ಲಿ ಗುಡಿಸಲಿಗೆ ಬೆಂಕಿ: ಒಂದೇ ಕುಟುಂಬದ 7 ಮಂದಿ ಸಜೀವ ದಹನ
ಹರ್‌ಪ್ರೀತ್, ಲಖ್ಬೀರ್ ಸಿಂಗ್ ರೋಡ್ ಜೊತೆಗೆ ಡಿಸೆಂಬರ್ 2021 ಲುಧಿಯಾನ ಕೋರ್ಟ್ ಕಟ್ಟಡ ಸ್ಫೋಟದ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ. ಲಖ್ಬೀರ್ ಸಿಂಗ್ ಸೂಚನೆಯ ಮೇರೆಗೆ ಹರ್ಪ್ರೀತ್ ಸಿಂಗ್ ವಿಶೇಷವಾಗಿ ತಯಾರಿಸಿದ ಐಇಡಿಗಳನ್ನು ಪಾಕಿಸ್ತಾನದಿಂದ ಭಾರತದಲ್ಲಿರುವ ತನ್ನ ಸಹಚರರಿಗೆ ಕಳುಹಿಸಿದ್ದ ಎಂದು ಎನ್‌ಐಎ ಹೇಳಿದೆ. ಲುಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಸ್ಫೋಟದಲ್ಲಿ ಈ ಐಇಡಿ ಬಳಸಲಾಗಿತ್ತು ಎನ್ನಲಾಗಿದೆ. ಈ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.