ಅದಾನಿ ಬಂದರು ಗದ್ದಲ: ವಿಳಿಂಜಮ್ ನಲ್ಲಿ ಕೇಂದ್ರ ಪಡೆಗಳ ನಿಯೋಜನೆ ಬೇಡ - ಶಶಿ ತರೂರ್

ಅದಾನಿ ಬಂದರು ವಿವಾದಕ್ಕೆ ಸಂಬಂಧಿಸಿದಂತೆ ವಿಳಿಂಜಮ್ ನಲ್ಲಿ ಯಾವುದೇ ಕೇಂದ್ರ ಪಡೆಗಳನ್ನು ನಿಯೋಜಿಸಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್
ಶಶಿ ತರೂರ್

ತಿರುವನಂತಪುರಂ: ಅದಾನಿ ಬಂದರು ವಿವಾದಕ್ಕೆ ಸಂಬಂಧಿಸಿದಂತೆ ವಿಳಿಂಜಮ್ ನಲ್ಲಿ ಯಾವುದೇ ಕೇಂದ್ರ ಪಡೆಗಳನ್ನು ನಿಯೋಜಿಸಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ವಿಳಿಂಜಮ್ ಬಂದರಿಗೆ ಬೆಂಬಲ ನೀಡಿದ್ದಕ್ಕಾಗಿ ತರೂರ್ ತಿರುವನಂತಪುರಂ ಲ್ಯಾಟಿನ್ ಕ್ಯಾಥೋಲಿಕ್ ಆರ್ಚ್‌ಡಯಾಸಿಸ್ ಮತ್ತು ಮೀನುಗಾರರ ಸಮುದಾಯದ ಕೋಪವನ್ನು ಎದುರಿಸುತ್ತಿದ್ದಾರೆ.

ವಿಳಿಂಜಮ್ ನಲ್ಲಿ ನಡೆಯುತ್ತಿರುವ ವಿವಾದಗಳು ಮತ್ತು ಸಂಬಂಧಿತ ಬೆಳವಣಿಗೆಗಳು ಸುಗಮವಾಗಿಲ್ಲ. ಈ ಸಂಬಂಧ ಬಿಷಪ್‌ಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಬಾರದು. ಮೀನುಗಾರರು ಯಾವುದೇ ಬೆಳವಣಿಗೆಯ ವಿರುದ್ಧವಾಗಿಲ್ಲ. ಅವರು ದೇಶವಿರೋಧಿಗಳಲ್ಲ ಎಂದು ತರೂರ್ ಹೇಳಿದರು.

ಮೀನುಗಾರರ ಪ್ರತಿಭಟನೆಯಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಕಾಮಗಾರಿ ಸ್ಥಗಿತಗೊಂಡಿರುವ ವಿಳಿಂಜಮ್ ಬಂದರಿನ ಸ್ಥಳದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸುವುದಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ ಎಂದು ಈ ಹಿಂದೆ ಹೈಕೋರ್ಟ್‌ಗೆ ತಿಳಿಸಿತ್ತು.

ಎರಟ್ಟುಪೆಟ್ಟಾದಲ್ಲಿ ತರೂರ್ ಅವರ ಯುವ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಪಕ್ಷಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂಬ ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಟ್ಟಕಂ ಸುರೇಶ್ ಆರೋಪವನ್ನು ತರೂರ್ ತಳ್ಳಿಹಾಕಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ಯುವ ಕಾಂಗ್ರೆಸ್ ಕಾರ್ಯಕ್ರಮ ನಿಗದಿಯಾಗಿತ್ತು ಎಂದು ಹೇಳಿದ್ದಾರೆ.

ಕೊಚ್ಚಿಗೆ ತೆರಳುವ ಮಾರ್ಗಮಧ್ಯೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ತಮ್ಮ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷರನ್ನು ಕರೆಸಿ ತಮ್ಮ ಪ್ರವಾಸದ ಬಗ್ಗೆ ತಿಳಿಸಲಾಗಿದೆ ಎಂದರು. ಯೂತ್ ಕಾಂಗ್ರೆಸ್ ಕೊಟ್ಟಾಯಂ ಜಿಲ್ಲಾ ಸಮಿತಿಯು ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿತ್ತು ಎಂದು ತರೂರ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com