ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದಿತ ದೇವಮಾನವ 'ಕಂಪ್ಯೂಟರ್ ಬಾಬಾ' ಭಾಗಿ; ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಈ ಹಿಂದೆ ಅತಿಕ್ರಮಣ ಪ್ರಕರಣದಲ್ಲಿ ಬಂಧಿತರಾಗಿದ್ದ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಶನಿವಾರ ಮಧ್ಯ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ...
ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದಿತ ದೇವಮಾನವ 'ಕಂಪ್ಯೂಟರ್ ಬಾಬಾ' ಭಾಗಿ
ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದಿತ ದೇವಮಾನವ 'ಕಂಪ್ಯೂಟರ್ ಬಾಬಾ' ಭಾಗಿ

ಅಗರ್ ಮಾಲ್ವಾ: ಈ ಹಿಂದೆ ಅತಿಕ್ರಮಣ ಪ್ರಕರಣದಲ್ಲಿ ಬಂಧಿತರಾಗಿದ್ದ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಶನಿವಾರ ಮಧ್ಯ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ಸಂಬಂಧ ಕಾಂಗ್ರೆಸ್ ವಿರುದ್ಧ ಆಡಳಿತಾರೂಢ ಬಿಜೆಪಿ ವಾಗ್ದಾಳಿ ನಡೆಸಿದೆ.

ಇಂದೋರ್ ಬಳಿಯ ಅವರ ಆಶ್ರಮದಲ್ಲಿ ಆಪಾದಿತ ಅಕ್ರಮ ನಿರ್ಮಾಣವನ್ನು ಕೆಡವುವ ಮೊದಲು ಪಂಚಾಯತ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತ್ಯಾಗಿ ಅವರನ್ನು 2020 ರಲ್ಲಿ ಬಂಧಿಸಲಾಗಿತ್ತು.

ಇಂದು ಬೆಳಗ್ಗೆ ಅಗರ್ ಮಾಲ್ವಾ ಜಿಲ್ಲೆಯ ಮಹುದಿಯಾ ಗ್ರಾಮದಲ್ಲಿ ತ್ಯಾಗಿ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್  ಗಾಂಧಿ ಜೊತೆ ಹೆಜ್ಜೆ ಹಾಕಿದರು.

ಅಲ್ಲದೆ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೊಂದಿಗೆ ಬಾಬಾ ಕೆಲವು ನಿಮಿಷಗಳ ಕಾಲ ಮಾತುಕತೆ ಸಹ ನಡೆಸಿದರು.

"ಕನ್ಹಯ್ಯಾ ಕುಮಾರ್ ಮತ್ತು ನಟಿ ಸ್ವರಾ ಭಾಸ್ಕರ್ ನಂತರ ಈಗ ಕಂಪ್ಯೂಟರ್ ಬಾಬಾ? ಇದು ಯಾವ ರೀತಿಯ ಜೋಡೋ ಯಾತ್ರೆ?" ‘ಕಂಪ್ಯೂಟರ್ ಬಾಬಾ’ ಸರ್ಕಾರಿ ಭೂಮಿ ಒತ್ತುವರಿ ಮತ್ತಿತರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜೈಲಿಗೂ ಹೋಗಿ ಬಂದಿದ್ದಾರೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಜೆಪಿ ಮುಖಂಡ ನರೇಂದ್ರ ಸಲೂಜಾ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಮಾಜಿ ಸಚಿವ ರಾಜ್‌ಕುಮಾರ್ ಪಟೇಲ್, ಹಲವಾರು ದಾರ್ಶನಿಕರು ಮತ್ತು ಧಾರ್ಮಿಕ ಮುಖಂಡರು ಭಾರತ್ ಜೋಡೋ ಯಾತ್ರೆಯ ಭಾಗವಾಗುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com