ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲದ ಎರಡು ಪಟ್ಟಣಗಳಿಗೆ 'ಸ್ವಚ್ಛ ವಾಯು ಸರ್ವೇಕ್ಷಣ್' ಪ್ರಶಸ್ತಿ

ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲ ಪ್ರದೇಶದ ಸುಂದರನಗರ ಮತ್ತು ನಲಗಢ ಪಟ್ಟಣ 2022ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ವಾಯು ಸರ್ವೇಕ್ಷಣ್  ಪ್ರಶಸ್ತಿ ಪಡೆದುಕೊಂಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿಮ್ಲಾ: ಗಾಳಿಯ ಗುಣಮಟ್ಟಕ್ಕಾಗಿ ಹಿಮಾಚಲ ಪ್ರದೇಶದ ಸುಂದರನಗರ ಮತ್ತು ನಲಗಢ ಪಟ್ಟಣ 2022ನೇ ಸಾಲಿನ ರಾಷ್ಟ್ರೀಯ ಸ್ವಚ್ಛ ವಾಯು ಸರ್ವೇಕ್ಷಣ್  ಪ್ರಶಸ್ತಿ ಪಡೆದುಕೊಂಡಿವೆ.

ರಾಷ್ಟ್ರೀಯ ಸ್ವಚ್ಛ ವಾಯು ಯೋಜನೆಯಿಂದ ನೀಡುವ ಈ ಪ್ರಶಸ್ತಿಯಲ್ಲಿ ಸುಂದರನಗರ ಎರಡನೇ ಸ್ಥಾನ ಪಡೆದಿದ್ದರೆ, ನಲಗಢ ಪಟ್ಟಣ ಮೂರನೇ ಸ್ಥಾನ ಪಡೆದಿದೆ.

ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಮತ್ತು ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಅವರು ಶನಿವಾರ ಭುವನೇಶ್ವರದಲ್ಲಿ ‘ವಾಯು’ ಎಂಬ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಹಿಮಾಚಲ ಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಮನೋಜ್ ಚೌಹಾಣ್ ಎರಡು ಪಟ್ಟಣಗಳಿಗೆ ಕ್ರಮವಾಗಿ 25 ಲಕ್ಷ ಹಾಗೂ 12.5 ಲಕ್ಷ ರೂಪಾಯಿ ನಗದು ಪ್ರಶಸ್ತಿಯನ್ನು ರಾಜ್ಯದ ಪರವಾಗಿ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com