ವೆಲ್ಲಿಂಗ್ಟನ್: ದಿವಂಗತ ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ ಸಿಡಿಎಸ್ ಅನಿಲ್ ಚೌಹಾಣ್ ಉಪನ್ಯಾಸ
ದೇಶದ ಮೊದಲ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸ್ಮರಣೆ ಅಂಗವಾಗಿ ಅವರ ಉತ್ತರಾಧಿಕಾರಿ ಜನರಲ್ ಅನಿಲ್ ಚೌಹಾಣ್ ಅವರು ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ.
Published: 05th December 2022 06:14 PM | Last Updated: 05th December 2022 06:56 PM | A+A A-

ಸಿಡಿಎಸ್ ಅನಿಲ್ ಚೌಹಾಣ್
ವೆಲ್ಲಿಂಗ್ಟನ್: ದೇಶದ ಮೊದಲ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸ್ಮರಣೆ ಅಂಗವಾಗಿ ಅವರ ಉತ್ತರಾಧಿಕಾರಿ ಜನರಲ್ ಅನಿಲ್ ಚೌಹಾಣ್ ಅವರು ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ.
ಡಿಸೆಂಬರ್ 8, 2021ರಲ್ಲಿ ಜನರಲ್ ಬಿಪಿನ್ ರಾವತ್ ಉಪನ್ಯಾಸ ನೀಡಬೇಕಿತ್ತು. ಆದರೆ, ಮಾರ್ಗ ಮಧ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅವರ ಪತ್ನಿ ಮಧುಲಿಕಾ ಸೇರಿದಂತೆ ಇತರ 12 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು.
ದಿವಂಗತ ಜನರಲ್ ಬಿಪಿನ್ ರಾವತ್ ಅವರ ಸ್ಮರಣಾರ್ಥ ಉಪನ್ಯಾಸ ನೀಡಲು ಜನರಲ್ ಅನಿಲ್ ಚೌಹಾಣ್ ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಪ್ರಸ್ತುತ ಸಿಡಿಎಸ್ ಆಗಿರುವ ಚೌಹಾಣ್ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಮತ್ತು ನಂತರ ಪೂರ್ವ ಸೇನಾ ಕಮಾಂಡರ್ ಆಗಿ ಜನರಲ್ ರಾವತ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದಾರೆ.
ಜನರಲ್ ರಾವತ್ ಅವರ ಉತ್ತರಾಧಿಕಾರಿಯಾಗಿ ಜನರಲ್ ಚೌಹಾಣ್ ಅವರನ್ನು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಈ ವರ್ಷದ ಅಕ್ಟೋಬರ್‌ನಲ್ಲಿ ಆಯ್ಕೆ ಮಾಡಲಾಗಿತ್ತು. ಜನರಲ್ ಬಿಪಿನ್ ರಾವತ್ ಸ್ಮರಣಾರ್ಥ ಡಿಸೆಂಬರ್ 10 ರಂದು ಉಪನ್ಯಾಸವನ್ನು ಭಾರತೀಯ ಸೇನೆ ಆಯೋಜಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಜನರಲ್ ಚೌಹಾಣ್ ಅವರು ಡಿಸೆಂಬರ್ 8 ರಂದು ಜನರಲ್ ಬಿಪಿನ್ ರಾವತ್ ಅವರ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ.