ಗುಜರಾತ್ ವಿಧಾನಸಭೆಗೆ 2ನೇ ಹಂತದ ಚುನಾವಣೆ: ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ ತಾಯಿ ಹೀರಾ ಬೆನ್!
ಗುಜರಾತ್ ವಿಧಾನಸಭೆಗೆ ಸೋಮವಾರ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಶತಾಯುಷಿ ತಾಯಿ ಹೀರಾಬೆನ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
Published: 05th December 2022 01:32 PM | Last Updated: 05th December 2022 02:29 PM | A+A A-

ಮೋದಿ ಅವರ ತಾಯಿ ಹೀರಾಬೆನ್
ಗಾಂಧಿನಗರ: ಗುಜರಾತ್ ವಿಧಾನಸಭೆಗೆ ಸೋಮವಾರ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಶತಾಯುಷಿ ತಾಯಿ ಹೀರಾಬೆನ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗಾಂಧಿನಗರ ಬಳಿಯ ರೇಸನ್ ಗ್ರಾಮದಲ್ಲಿ ಸ್ಥಾಪಿಸಲಾದ ಮತಗಟ್ಟೆಗೆ ಬಂದು ಹೀರಾಬೆನ್ ಮತದಾನ ಮಾಡಿದ್ದಾರೆ. ಜೂನ್ ನಲ್ಲಿ 100ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿ ಅವರ ತಾಯಿ, ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗೆ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ 2ನೇ ಹಂತ: ಈವರೆಗೂ ಶೇ.19.17ರಷ್ಟು ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ಪಂಕಜ್ ಮೋದಿ ಮತ್ತಿತರ ಕುಟುಂಬಸ್ಥರ ನೆರವಿನೊಂದಿಗೆ ವೀಲ್ಹ್ ಚೇರ್ ನಲ್ಲಿ ಮತಗಟ್ಟೆಗೆ ಆಗಮಿಸಿದ ಹೀರಾಬೆನ್ ತನ್ನ ಹಕ್ಕನ್ನು ಚಲಾಯಿಸಿದರು.
Prime Minister Narendra Modi's mother Heeraben Modi casts her vote for the second phase of #GujaratAssemblyPolls in Raysan Primary School, Gandhinagar pic.twitter.com/ZfWcBXWCfI
— ANI (@ANI) December 5, 2022
ಭಾನುವಾರ ಸಂಜೆ ತಮ್ಮ ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದರು. ಒಟ್ಟಾರೇ 182 ಕ್ಷೇತ್ರಗಳ ಪೈಕಿ 93 ಕ್ಷೇತ್ರಗಳಿಗೆ ಗುಜರಾತ್ ಉತ್ತರ ಮತ್ತು ಕೇಂದ್ರೀಯ ಭಾಗದಲ್ಲಿ ಸೋಮವಾರ ಮತದಾನ ಪ್ರಗತಿಯಲ್ಲಿದೆ.