ಉಪ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಜನರನ್ನು ತಡೆಯಲಾಗುತ್ತಿದೆ: ಅಖಿಲೇಶ್ ಯಾದವ್ ಆರೋಪ
ರಾಂಪುರ ಮತ್ತು ಖಟುವಾಲಿ ವಿಧಾನಸಭೆ ಕ್ಷೇತ್ರ ಹಾಗೂ ಮೈನ್ ಪುರಿ ಸಂಸದೀಯ ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗಿನಿಂದ ಮತದಾನ ಆರಂಭವಾಗಿದೆ. ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿದ್ದ ಮೈನ್ ಪುರಿ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.
Published: 05th December 2022 01:35 PM | Last Updated: 05th December 2022 02:31 PM | A+A A-

ಅಖಿಲೇಶ್ ಯಾದವ್
ಲಕ್ನೋ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಮೈನ್‌ಪುರಿ ಸಂಸದೀಯ ಮತ್ತು ರಾಂಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡದಂತೆ ಪೊಲೀಸರು ಮತ್ತು ಸ್ಥಳೀಯ ಆಡಳಿತ ಜನರನ್ನು ತಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸೋಮವಾರ ಬೆಳಗ್ಗಿನಿಂದ ರಾಂಪುರ ಮತ್ತು ಖಟುವಾಲಿ ವಿಧಾನಸಭೆ ಕ್ಷೇತ್ರ ಹಾಗೂ ಮೈನ್ ಪುರಿ ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿದ್ದ ಮೈನ್ ಪುರಿ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.
ಪೊಲೀಸ್ ಪಡೆಗೆ ಏನು ಹೇಳಲಾಗಿದೆ? ಮೈನ್‌ಪುರಿಯಲ್ಲಿ ಜನರು ಮತದಾನ ಮಾಡುವುದನ್ನು ತಡೆಯುವಂತೆ ಅವರನ್ನು ಕೇಳಲಾಗಿದೆ. ರಾಂಪುರದಲ್ಲೂ ಜನರು ಮತ ಹಾಕದಂತೆ ತಡೆದಿದ್ದಾರೆ. ಜನರು ಹೊರಗೆ ಬರದಂತೆ ಎಲ್ಲಾ ತಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ" ಎಂದು ಯಾದವ್ ಮೈನ್‌ಪುರಿಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಆಯೋಗವು ಇಂತಹ ದೂರುಗಳನ್ನು ನಿರ್ಲಕ್ಷಿಸುತ್ತಿದೆ ಮತ್ತು ಕಣ್ಣು ಮುಚ್ಚಿ ಕುಳಿತಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಹೇಳಿದರು.
ಚುನಾವಣಾ ಆಯೋಗ ಸರ್ಕಾರದಿಂದ ಎಲ್ಲಾ ರೀತಿಯ ನಿರ್ದೇಶನಗಳನ್ನು ಪಡೆಯುತ್ತಿದೆ ಎಂದು ಯಾದವ್ ಆರೋಪಿಸಿದರು. ಜನರಿಗೆ ಮದ್ಯ ಹಂಚಿ ಎಸ್ ಪಿ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. "ನೀವು ಇಲ್ಲಿ (ಮೈನ್‌ಪುರಿಯಲ್ಲಿ) ಕಾಣುವ ಎಲ್ಲಾ ಅಭಿವೃದ್ಧಿಯನ್ನು 'ನೇತಾಜಿ' (ಮುಲಾಯಂ) ಮಾಡುತ್ತಿದ್ದಾರೆ. ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ, ನಮ್ಮ ಪರವಾಗಿ ಮತ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.