ಜೆಡಿಯು ಅಧ್ಯಕ್ಷರಾಗಿ ರಾಜೀವ್ ರಂಜನ್ ಅವಿರೋಧವಾಗಿ ಮರು ಆಯ್ಕೆ

ಲಲನ್ ಸಿಂಗ್ ಎಂದು ಖ್ಯಾತಿ ಪಡೆದಿರುವ ಜನತಾ ದಳ-ಯುನೈಟೆಡ್(ಜೆಡಿಯು) ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವರು ಮತ್ತೆ ಮೂರು ವರ್ಷಗಳ ಅವಧಿಗೆ ಜೆಡಿಯು ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಲನ್ ಸಿಂಗ್
ಲಲನ್ ಸಿಂಗ್

ಪಾಟ್ನಾ: ಲಲನ್ ಸಿಂಗ್ ಎಂದು ಖ್ಯಾತಿ ಪಡೆದಿರುವ ಜನತಾ ದಳ-ಯುನೈಟೆಡ್(ಜೆಡಿಯು) ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವರು ಮತ್ತೆ ಮೂರು ವರ್ಷಗಳ ಅವಧಿಗೆ ಜೆಡಿಯು ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಕ್ಷದ ಪ್ರಮುಖ ನಾಯಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿರುವ ಸಿಂಗ್ ಅವರು ಮಾತ್ರ ಚುನಾವಣಾ ಕಣದಲ್ಲಿದ್ದರು ಮತ್ತು ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಸಿಂಗ್ ಅವರು ಜೆಡಿಯು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಅಫಕ್ ಅಹ್ಮದ್ ಖಾನ್ ಹೇಳಿದ್ದಾರೆ. 

ಈ ಹಿಂದೆ ಕೇಂದ್ರ ಸಚಿವರಾಗಿದ್ದ ಆರ್‌ಸಿಪಿ ಸಿಂಗ್ ರಾಜೀನಾಮೆ ನೀಡಿದ ನಂತರ ಜುಲೈ 2021 ರಲ್ಲಿ ಲಲನ್ ಸಿಂಗ್ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಹೊಸದಾಗಿ ಆಯ್ಕೆಯಾದ ಜೆಡಿಯು ರಾಷ್ಟ್ರೀಯ ಮಂಡಳಿಯು ಲಲನ್ ಸಿಂಗ್ ಅವರ ಆಯ್ಕೆಯನ್ನು ಅನುಮೋದಿಸಲು ಡಿಸೆಂಬರ್ 10 ರಂದು ಪಾಟ್ನಾದಲ್ಲಿ ಸಭೆ ಸೇರಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com