ಉತ್ತರಾಖಂಡ: ಕಾಳಿ ನದಿ ನಿರ್ಮಾಣ ಕಾಮಗಾರಿ ವಿರೋಧಿಸಿ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿಗರಿಂದ ಕಲ್ಲು ತೂರಾಟ!

ಉತ್ತರಾಖಂಡದ ಪಿಥೋರಗಢ್‌ದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಕಾಳಿ ನದಿ ನಿರ್ಮಾಣ ಕಾಮಗಾರಿ ವಿರೋಧಿಸಿ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿಗರು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಿತೋರಗಢ: ಉತ್ತರಾಖಂಡದ ಪಿಥೋರಗಢ್‌ದಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಕಾಳಿ ನದಿ ನಿರ್ಮಾಣ ಕಾಮಗಾರಿ ವಿರೋಧಿಸಿ ಭಾರತೀಯ ಕಾರ್ಮಿಕರ ಮೇಲೆ ನೇಪಾಳಿಗರು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಭಾರತವು ಕಾಳಿ ನದಿಗೆ ಒಡ್ಡು ನಿರ್ಮಿಸುವುದನ್ನು ನೇಪಾಳದ ಸಂಘಟನೆಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಲು ತೂರಾಟ ನಡೆದಿದೆ. ಧಾರ್ಚುಲಾ ಪ್ರದೇಶದಲ್ಲಿ ಭಾನುವಾರ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಹಿಂದೆಯೂ ಕಲ್ಲು ತೂರಾಟದ ಘಟನೆಗಳು ವರದಿಯಾಗಿದ್ದವು.

ಒಡ್ಡು ತನ್ನ ಭಾಗದಲ್ಲಿ ನಿರ್ಮಾಣವಾಗುತ್ತಿದ್ದು, ಹಿಮಾಲಯಕ್ಕೆ ತೊಂದರೆಯಾಗಬಾರದು ಎಂದು ಭಾರತ ಸಮರ್ಥಿಸಿಕೊಂಡಿದೆ.

ವರದಿಗಳ ಪ್ರಕಾರ, ಶಾರದಾ ನದಿ ಮತ್ತು ಮಹಾಕಾಳಿ ನದಿ ಎಂದೂ ಕರೆಯಲ್ಪಡುವ ಕಾಳಿ ನದಿಯು ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಹಿಮಾಲಯದ ಕಾಲಾಪಾನಿಯಲ್ಲಿ ಹುಟ್ಟುತ್ತದೆ. ಇದು ಭಾರತದೊಂದಿಗೆ ನೇಪಾಳದ ಪಶ್ಚಿಮ ಗಡಿಯಲ್ಲಿ ಹರಿಯುತ್ತದೆ.

ಭಾರತದ ಭಾಗದಲ್ಲಿ 1,700 ಮೀಟರ್‌ಗಿಂತಲೂ ಹೆಚ್ಚು ಉದ್ದದ ಒಡ್ಡು ನಿರ್ಮಾಣವು ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com