ನಕಲಿ ಸುದ್ದಿ ಹರಡುವ ಸಾಮಾಜಿಕ ಮಾಧ್ಯಮಗಳಿಂದ ಚುನಾವಣೆ ಮೇಲೆ ಪರಿಣಾಮ: ಮುಖ್ಯ ಚುನಾವಣಾ ಆಯುಕ್ತ

ನಕಲಿ ಸುದ್ದಿ ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳು  ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಚುನಾವಣಾ ನಿರ್ವಹಣಾ ಸಂಸ್ಥೆಗಳಿಗೆ ಸಾಮಾನ್ಯ ಸವಾಲಾಗಿ ಹೊರಹೊಮ್ಮುತ್ತಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ನವದೆಹಲಿ: ನಕಲಿ ಸುದ್ದಿ ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳು  ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಚುನಾವಣಾ ನಿರ್ವಹಣಾ ಸಂಸ್ಥೆಗಳಿಗೆ ಸಾಮಾನ್ಯ ಸವಾಲಾಗಿ ಹೊರಹೊಮ್ಮುತ್ತಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಂಗಳವಾರ ಹೇಳಿದ್ದಾರೆ.

ಜರ್ಮನಿ ವಿದೇಶಾಂಗ ಸಚಿವೆ ಅನ್ನಲೀನಾ ಬೇರ್ಬಾಕ್ ನೇತೃತ್ವದ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಕಲ್ಪನೆಯು ಭಾರತದ ಐತಿಹಾಸಿಕ ಅಂಶಗಳು ಮತ್ತು ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಎಂದರು.

ನಿಯೋಗಕ್ಕೆ ಭಾರತದ ಚುನಾವಣಾ ವ್ಯವಸ್ಥೆಯ ಚಿತ್ರಣ ನೀಡಿದ ಅವರು, ಚುನಾವಣೆ ಅತಿದೊಡ್ಡದಾದ ಕಸರತ್ತು, 95 ಕೋಟಿ ಮತದಾರರಿದ್ದು, 11 ಲಕ್ಷ ಮತಗಟ್ಟೆಗಳಿವೆ. ಚುನಾವಣೆಗೆ ಒಂದು ಕೋಟಿ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದರು.

ಚುನಾವಣಾ ಆಯೋಗ ಈ ಕುರಿತ ಹೇಳಿಕೆಯಲ್ಲಿ ಸಾಗಣೆ, ಸಂಚಾರದ ಸವಾಲಿನ ಜೊತೆಗೆ ಜಾಲತಾಣಗಳಲ್ಲಿ ನಡೆಯುವ ನಕಲಿ ಪ್ರಚಾರಗಳು ಆಯೋಗಕ್ಕೆ ಇತ್ತೀಚಿಗೆ ಎದುರಾಗುತ್ತಿರುವ ಸಾಮಾನ್ಯ ಸವಾಲಾಗಿವೆ ಎಂದು ಆಯುಕ್ತರು ತಿಳಿಸಿದರು ಎಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com