ತಮಿಳುನಾಡಿನಲ್ಲಿ ಭೀಕರ ಅಪಘಾತ, ಆರು ಮಂದಿ ಸಾವು; ಪರಿಹಾರಕ್ಕೆ ಸಿಎಂ ಸ್ಟಾಲಿನ್ ಆದೇಶ
ತಮಿಳುನಾಡಿನ ಮದುರಾಂತಕಂ ಬಳಿ ಮಿನಿವ್ಯಾನ್ ವೊಂದು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
Published: 07th December 2022 05:16 PM | Last Updated: 07th December 2022 05:16 PM | A+A A-

ಅಪಘಾತದಲ್ಲಿ ನಜ್ಜು ಗುಜ್ಜಾಗಿರುವ ಮಿನಿವ್ಯಾನ್
ಚೆನ್ನೈ: ತಮಿಳುನಾಡಿನ ಮದುರಾಂತಕಂ ಬಳಿ ಮಿನಿವ್ಯಾನ್ ವೊಂದು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇಂದು ಬೆಳಗಿನ ಜಾವ ಚೆಂಗಲ್‌ಪೇಟ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಮತ್ತು ಪ್ರಯಾಣಿಕರು ತಿರುವಣ್ಣಾಮಲೈನಿಂದ ಚೆನ್ನೈಗೆ ಹಿಂತಿರುಗುತ್ತಿದ್ದರು.
ಇದನ್ನು ಓದಿ: ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಸಿಂದಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಉಕ್ಕುಂದ ಮತ್ತು ಪತ್ನಿ ಸಾವು
ಮೃತಪಟ್ಟವರಲ್ಲಿ ಮೂವರು 28 ರಿಂದ 33 ವರ್ಷ ವಯಸ್ಸಿನವರಾಗಿದ್ದು, ಒಬ್ಬ ವ್ಯಕ್ತಿಗೆ 70 ವರ್ಷ ಮತ್ತು ಇತರ ಇಬ್ಬರಿಗೆ 55 ಹಾಗೂ 65 ವರ್ಷ ವಯಸ್ಸಿನವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಚೆಂಗಲ್‌ಪೇಟೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಮಿಳು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.