ಮಧ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹುಲಿ ಶವ ಪತ್ತೆ!
'ಟೈಗರ್ ಸ್ಟೇಟ್' ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು ಎರಡು ವರ್ಷದ ಗಂಡು ಹುಲಿಯ ಶವ ಮರದ ಬಲೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Published: 07th December 2022 05:57 PM | Last Updated: 07th December 2022 05:57 PM | A+A A-

ಹುಲಿ ಶವ
ಭೋಪಾಲ್: 'ಟೈಗರ್ ಸ್ಟೇಟ್' ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು ಎರಡು ವರ್ಷದ ಗಂಡು ಹುಲಿಯ ಶವ ಮರದ ಬಲೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಜ್ಯ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳು ಹುಲಿಯ ನಿಗೂಢ ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದು ಕಳೆದ ಎರಡು ಮೂರು ದಶಕಗಳಲ್ಲೇ ದೇಶದಲ್ಲಿ ಮರದ ಬಲೆಗೆ ಸಿಲುಕಿ ಹುಲಿ ಮೃತಪಟ್ಟಿರುವ ಮೊದಲ ಘಟನೆ ಎಂದು ಖ್ಯಾತ ವನ್ಯಜೀವಿ ತಜ್ಞ ಅಜಯ್ ದುಬೆ ಹೇಳಿದ್ದಾರೆ.
ಇದನ್ನು ಓದಿ: ಮಧ್ಯ ಪ್ರದೇಶ: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ಪನ್ನಾ ಮತ್ತು ಅಕ್ಕಪಕ್ಕದ ಪ್ರದೇಶಗಳು ಸಂಘಟಿತ ಹುಲಿ ಬೇಟೆಗೆ ಕುಖ್ಯಾತಿ ಪಡೆದಿದ್ದು, 2008 ರಿಂದ ಪನ್ನಾ ಟೈಗರ್ ರಿಸರ್ವ್(ಪಿಟಿಆರ್) ಬಹುತೇಕ ಹುಲಿಗಳಿಂದ ಮುಕ್ತವಾಗಿದೆ ಎಂದು ಅವರು, ಇಡೀ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಜೀವ್ ಝಾ, ಅರಣ್ಯ ಸಂರಕ್ಷಣಾಧಿಕಾರಿ(ಛಾತಾಪುರ್) ಪ್ರಕಾರ, ಮಂಗಳವಾರ ರಾತ್ರಿ ಹುಲಿಯ ಸಾವು ವರದಿಯಾಗಿದೆ. ಆದರೆ ಬುಧವಾರ ಬೆಳಗ್ಗೆ ತಂಡ ಸ್ಥಳಕ್ಕೆ ತಲುಪಿದಾಗ ಹುಲಿಯ ಮೇಲೆ ಕುಣಿಕೆ ಕಂಡುಬಂದಿದೆ. ಸಂರಕ್ಷಿತ ಪ್ರದೇಶದ ಹೊರಗಿರುವ ಉತ್ತರ ಪನ್ನಾ ಅರಣ್ಯ ವಿಭಾಗದ ತಿಲಗಾಂವ್ ಅರಣ್ಯ ಬೀಟ್‌ನ ವಿಕ್ರಮಪುರ ಗ್ರಾಮದ ಬಳಿ ಕಾಡಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
"ಈಗಾಗಲೇ ಪಕ್ಕದ ಸತ್ನಾ ಮತ್ತು ಪನ್ನಾ ರಾಷ್ಟ್ರೀಯ ಉದ್ಯಾನವನದ ಸ್ನಿಫರ್ ಡಾಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ರಾಜ್ಯ ಅರಣ್ಯ ಇಲಾಖೆಯ ಟೈಗರ್ ಸ್ಟ್ರೈಕ್ ಫೋರ್ಸ್ ತಂಡವೂ ಸ್ಥಳದಲ್ಲೇ ತನಿಖೆಗೆ ಸೇರಿಕೊಂಡಿದೆ.
ಹುಲಿ ಶವಪರೀಕ್ಷೆಯ ನಂತರವೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ಸಾಮಾನ್ಯವಾಗಿ ಇತರ ಪ್ರಾಣಿಗಳಿಗೆ ಹಾಕಲಾದ ಬಲೆಗೆ(ಕ್ಲಚ್ ವೈರ್ ಟ್ರ್ಯಾಪ್) ಸಿಲುಕಿ ಹುಲಿಗಳು ಬಲಿಯಾಗುತ್ತವೆಯ ಇದು ಅದೇ ರೀತಿ ಕಾಣಿಸುತ್ತಿದೆ ಎಂದು ಝಾ ಹೇಳಿದ್ದಾರೆ.