ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ: ಆರಂಭಿಕ ಮತ ಎಣಿಕೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಗುಜರಾತ್ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಆರಂಭಿಕ ಮುನ್ನಡೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ದಾಟಿದೆ. ಇದುವರೆಗೆ ಗುಜರಾತ್ ನಲ್ಲಿ ಬಿಜೆಪಿ 137 ಸ್ಥಾನಗಳಲ್ಲಿ, ಕಾಂಗ್ರೆಸ್ 37 ಸ್ಥಾನಗಳಲ್ಲಿ, ಆಪ್ 6 ಕ್ಷೇತ್ರಗಳಲ್ಲಿ ಮತತ್ು ಇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
Published: 08th December 2022 09:05 AM | Last Updated: 08th December 2022 09:05 AM | A+A A-

ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ
ಗಾಂಧಿನಗರ/ಶಿಮ್ಲಾ: ಗುಜರಾತ್ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಆರಂಭಿಕ ಮುನ್ನಡೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ದಾಟಿದೆ. ಇದುವರೆಗೆ ಗುಜರಾತ್ ನಲ್ಲಿ ಬಿಜೆಪಿ 137 ಸ್ಥಾನಗಳಲ್ಲಿ, ಕಾಂಗ್ರೆಸ್ 37 ಸ್ಥಾನಗಳಲ್ಲಿ, ಆಪ್ 6 ಕ್ಷೇತ್ರಗಳಲ್ಲಿ ಮತತ್ು ಇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಹಿಮಾಚಲ ಪ್ರದೇಶದಲ್ಲಿ 33 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮತ್ತು ಇತರ ಅಭ್ಯರ್ಥಿಗಳು 1ರಲ್ಲಿ ಮುನ್ನಡೆ ಸಾಧಿಸಿದ್ದು ಆಪ್ ಖಾತೆ ತೆರೆಯುವ ಲಕ್ಷಣ ಕಾಣುತ್ತಿಲ್ಲ.
ಗುಜರಾತಿನ ವಿಜಯವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಹೊರತುಪಡಿಸಿ ಸತತ ಏಳು ವಿಧಾನಸಭಾ ಚುನಾವಣೆಗಳನ್ನು ಗೆದ್ದ ಏಕೈಕ ಪಕ್ಷವನ್ನಾಗಿ ಮಾಡುತ್ತದೆ. 1977 ರಿಂದ 2011 ರವರೆಗೆ 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಸಿಪಿಐ(ಎಂ) ಸತತ ಏಳು ಚುನಾವಣೆಗಳನ್ನು ಗೆದ್ದಿತ್ತು.