ಕಳೆದ 5 ವರ್ಷದಲ್ಲಿ ದೇಶದಲ್ಲಿ 2,900ಕ್ಕೂ ಹೆಚ್ಚು ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ: ಸರ್ಕಾರ
2017 ಮತ್ತು 2021ರ ನಡುವೆ ದೇಶದಲ್ಲಿ 2,900ಕ್ಕೂ ಹೆಚ್ಚು ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಾರೆ.
Published: 08th December 2022 12:46 AM | Last Updated: 08th December 2022 12:46 AM | A+A A-

ಸಂಗ್ರಹ ಚಿತ್ರ
ನವದೆಹಲಿ: 2017 ಮತ್ತು 2021ರ ನಡುವೆ ದೇಶದಲ್ಲಿ 2,900ಕ್ಕೂ ಹೆಚ್ಚು ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ ಅಂಶಗಳನ್ನು ಉಲ್ಲೇಖಿಸಿ ರಾಯ್ ಹೇಳಿದ್ದಾರೆ. 2021ರಲ್ಲಿ 378 ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು. 2020ರಲ್ಲಿ 857, 2019ರಲ್ಲಿ 438, 2018ರಲ್ಲಿ 512 ಮತ್ತು 2017ರಲ್ಲಿ 723 ಪ್ರಕರಣಗಳು ದಾಖಲಾಗಿವೆ.
2018ರ ಜುಲೈ 4ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಲಾಯಿತು. ಹಿಂಸಾಚಾರವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರುವ ನಕಲಿ ಸುದ್ದಿಗಳು ಮತ್ತು ವದಂತಿಗಳ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅಲ್ಲದೆ ಶಿಕ್ಷಿಸಲು ಹೇಳಲಾಗಿದೆ ಎಂದು ಸಚಿವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇದಲ್ಲದೆ, 2018ರಲ್ಲಿ ಜುಲೈ 23 ಮತ್ತು ಸೆಪ್ಟೆಂಬರ್ 25 ರಂದು ಸಲಹೆಗಳನ್ನು ನೀಡಲಾಯಿತು. ದೇಶದಲ್ಲಿ ಗುಂಪು ಹಿಂಸಾಚಾರದ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವನ್ನು ತಿಳಿಸಲಾಗಿತ್ತು ಎಂದರು.