ರೈತ ಪುತ್ರ ಮತ್ತು ಸೈನಿಕ ಶಾಲೆಯಲ್ಲಿ ಓದಿದವರು ನಮ್ಮ ಉಪ ರಾಷ್ಟ್ರಪತಿಗಳು: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ರಾಜ್ಯಸಭೆಯನ್ನುದ್ದೇಶಿಸಿ ಭಾಷಣದ್ದು, ಈ ವೇಳೆ ಉಪರಾಷ್ಟ್ರಪತಿಯವರನ್ನು ಮೇಲ್ಮನೆಗೆ ಸ್ವಾಗತಿಸಿದರು.
ರಾಜ್ಯಸಭೆಯಲ್ಲಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ.
ರಾಜ್ಯಸಭೆಯಲ್ಲಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ರಾಜ್ಯಸಭೆಯನ್ನುದ್ದೇಶಿಸಿ ಭಾಷಣದ್ದು, ಈ ವೇಳೆ ಉಪರಾಷ್ಟ್ರಪತಿಯವರನ್ನು ಮೇಲ್ಮನೆಗೆ ಸ್ವಾಗತಿಸಿದರು.

ಮೋದಿಯವರು ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಜಗದೀಪ್ ಧನಕರ್ ಅವರನ್ನು ಸಂಸತ್ತಿನ ಎಲ್ಲ ಸದಸ್ಯರು ಮತ್ತು ದೇಶದ ಎಲ್ಲ ನಾಗರಿಕರ ಪರವಾಗಿ ಅಭಿನಂದಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು.

ದೇಶದ ಉಪರಾಷ್ಟ್ರಪತಿಗಳ ಗೌರವಾನ್ವಿತ ಸ್ಥಾನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಆಸನವು ಲಕ್ಷಾಂತರ ಜನರಿಗೆ ಸ್ಫೂರ್ತಿಯ ನೆಲೆಯಾಗಿದೆ ಎಂದು ಹೇಳಿದರು.

ನಂತರ ರಾಜ್ಯಸಭೆಯ ಸಭಾಧ್ಯಕ್ಷರನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಇಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸದನದ ಎಲ್ಲ ಸದಸ್ಯರ ಪರವಾಗಿ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿಯವರ ಜನ್ಮಸ್ಥಳವಾದ ಝುಂಝುನುವನ್ನು ಉಲ್ಲೇಖಿಸಿದ ಮೋದಿಯವರು, ರಾಷ್ಟ್ರದ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ಝುಂಝುನುವಿನ ಅಸಂಖ್ಯಾತ ಕುಟುಂಬಗಳ ಕೊಡುಗೆಗಳನ್ನು ಶ್ಲಾಘಿಸಿದರು.

ಯೋಧರು ಮತ್ತು ಕಿಸಾನ್ ರೊಂದಿಗಿನ ಉಪರಾಷ್ಟ್ರಪತಿಯವರ ನಿಕಟ ಸಂಬಂಧವನ್ನು ಉಲ್ಲೇಖಿಸಿ, "ನಮ್ಮ ಉಪರಾಷ್ಟ್ರಪತಿಯವರು ರೈತಪುತ್ರ ಮತ್ತು ಅವರು ಸೈನಿಕ ಶಾಲೆಯಲ್ಲಿ ಓದಿದವರಾಗಿದ್ದಾರೆ. ಹೀಗಾಗಿ, ಅವರು ಜವಾನ್ ಮತ್ತು ಕಿಸಾನ್ ರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ" ಎಂದು ಹೇಳಿದರು.

ಭಾರತವು ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾದ ಈ ಸಮಯದಲ್ಲಿ ಸಂಸತ್ತಿನ ಗೌರವಾನ್ವಿತ ಮೇಲ್ಮನೆಗೆ ಉಪರಾಷ್ಟ್ರಪತಿಯವರನ್ನು ಸ್ವಾಗತಿಸುತ್ತಿದ್ದೇನೆ. ಭಾರತವು 'ಸ್ವಾತಂತ್ರ್ಯದ ಅಮೃತ ಕಾಲ' ಕ್ಕೆ ಪ್ರವೇಶಿಸಿದೆ ಮತ್ತು ಜಿ-20 ಶೃಂಗಸಭೆಯ ಆತಿಥ್ಯ ವಹಿಸುವ ಮೂಲಕ ಅದರ ಅಧ್ಯಕ್ಷತೆ ವಹಿಸುವ ಪ್ರತಿಷ್ಠಿತ ಅವಕಾಶವನ್ನು ಪಡೆದುಕೊಂಡಿದೆ. ನವ ಭಾರತದ ಅಭಿವೃದ್ಧಿಯ ಹೊಸ ಯುಗದ ಪ್ರಾರಂಭವನ್ನು ಗುರುತಿಸುವುದಲ್ಲದೆ, ಮುಂಬರುವ ದಿನಗಳಲ್ಲಿ ವಿಶ್ವದ ದಿಕ್ಕನ್ನು ನಿರ್ಧರಿಸುವತ್ತ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
"ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂಸತ್ತು ಮತ್ತು ನಮ್ಮ ಸಂಸದೀಯ ವ್ಯವಸ್ಥೆಯು ಈ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ" ಎಂದು ತಿಳಿಸಿದರು.

ಈ ದಿನವು ರಾಜ್ಯಸಭೆಯ ಅಧ್ಯಕ್ಷರಾಗಿ ಉಪರಾಷ್ಟ್ರಪತಿಯವರ ಅಧಿಕಾರಾವಧಿಯ ಔಪಚಾರಿಕ ಆರಂಭವನ್ನು ಸೂಚಿಸುತ್ತದೆ, ಮೇಲ್ಮನೆಯ ಹೆಗಲ ಮೇಲಿರುವ ಜವಾಬ್ದಾರಿಯು ಸಾಮಾನ್ಯ ಜನರ ಕಾಳಜಿಗೆ ಸಂಬಂಧಿಸಿದೆ. "ಈ ಅವಧಿಯಲ್ಲಿ ಭಾರತವು ತನ್ನ ಜವಾಬ್ದಾರಿಗಳನ್ನು ಅರಿತು ಅದಕ್ಕೆ ಬದ್ಧವಾಗಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ರೂಪದಲ್ಲಿ ಭಾರತದ ಪ್ರತಿಷ್ಠಿತ ಬುಡಕಟ್ಟು ಸಮಾಜವು ಈ ಮಹತ್ವದ ಘಟ್ಟದಲ್ಲಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರು.

ಇದೇ ವೇಳೆ ಅಪ್ರಧಾನ ಸಮುದಾಯದಿಂದ ಬಂದ, ದೇಶದ ಅತ್ಯುನ್ನತ ಸ್ಥಾನವನ್ನು ತಲುಪಿದ ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರನ್ನೂ ಮೋದಿಯವರು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com