ಮುಸ್ಲಿಮೇತರ ಮಕ್ಕಳನ್ನು ಸೇರಿಸಿಕೊಳ್ಳುವ ಮಾನ್ಯತೆ ಇಲ್ಲದ ಮದರಸಾಗಳ ಬಗ್ಗೆ ವಿಚಾರಣೆ ನಡೆಸಿ: ರಾಜ್ಯಗಳಿಗೆ ಎನ್‌ಸಿಪಿಸಿಆರ್‌ ಸೂಚನೆ

ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ/ಮಾನ್ಯತೆ ಪಡೆದ ಮದರಸಾಗಳ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಮದರಸ ವಿದ್ಯಾರ್ಥಿಗಳು
ಮದರಸ ವಿದ್ಯಾರ್ಥಿಗಳು

ನವದೆಹಲಿ: ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ/ಮಾನ್ಯತೆ ಪಡೆದ ಮದರಸಾಗಳ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಈ ಕುರಿತು ಶುಕ್ರವಾರ ಮಹತ್ವದ ಸೂಚನೆ ನೀಡಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮುಸ್ಲಿಮೇತರ ಮಕ್ಕಳಿಗೆ ಪ್ರವೇಶ ನೀಡುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ/ಮಾನ್ಯತೆ ಪಡೆದ ಮದರಸಾಗಳ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ಇದಲ್ಲದೆ, ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಯು ಎಲ್ಲಾ ಮ್ಯಾಪ್ ಮಾಡದ ಮದರಸಾಗಳ ಮ್ಯಾಪಿಂಗ್ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಅಂತೆಯೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲು 30 ದಿನಗಳಲ್ಲಿ ರಾಜ್ಯಗಳಿಂದ ಕ್ರಮ ಕೈಗೊಂಡ ವರದಿಯನ್ನು ಆಯೋಗ ಕೇಳಿದೆ. ಗಮನಾರ್ಹವಾಗಿ, NCPCR ದೇಶಾದ್ಯಂತ ಸಮೀಕ್ಷೆಯನ್ನು ನಡೆಸಿತು ಮತ್ತು 1 ಕೋಟಿ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುತಿಸಲ್ಪಡದ ಮತ್ತು ಮ್ಯಾಪ್ ಮಾಡದ ಮದರಸಾಗಳಲ್ಲಿ ಓದುತ್ತಿದ್ದಾರೆ. ಹೀಗಾಗಿ, ಅವರು ಶಿಕ್ಷಣ ಹಕ್ಕು (ಆರ್‌ಟಿಇ) ವ್ಯಾಪ್ತಿಯಿಂದ ಹೊರಗಿದ್ದಾರೆ ಮತ್ತು ಶಾಲೆಯಿಂದ ಹೊರಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

ಮದರಸಾಗಳಲ್ಲಿ ಓದುತ್ತಿರುವ ಮುಸ್ಲಿಮೇತರ ಮಕ್ಕಳು
ಆಯೋಗಕ್ಕೆ ಬಂದಿರುವ ವಿವಿಧ ದೂರುಗಳ ಪ್ರಕಾರ, ಇಸ್ಲಾಂ ಹೊರತುಪಡಿಸಿ ಇತರ ಧರ್ಮದ ವಿದ್ಯಾರ್ಥಿಗಳು ಸಹ ಮದರಸಾಗಳಲ್ಲಿ ಓದುತ್ತಿದ್ದಾರೆ ಎಂದು ಕಂಡುಬಂದಿದೆ, “ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಮಕ್ಕಳು ಸರ್ಕಾರಿ ಅನುದಾನಿತ / ಮಾನ್ಯತೆ ಪಡೆದ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಗಮನಿಸಲಾಗಿದೆ. ಇದಲ್ಲದೆ ಕೆಲವು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಅವರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ ಎಂದು ಆಯೋಗದಿಂದ ತಿಳಿದುಬಂದಿದೆ. ಇದು ಸಂವಿಧಾನದ 28 (3) ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳನ್ನು ಯಾವುದೇ ಧಾರ್ಮಿಕ ಬೋಧನೆಯಲ್ಲಿ ಭಾಗವಹಿಸಲು ಶಿಕ್ಷಣ ಸಂಸ್ಥೆಗಳನ್ನು ನಿರ್ಬಂಧಿಸುವುದನ್ನು ನಿಷೇಧಿಸುತ್ತದೆ ”ಎಂದು NCPCR ನ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದರು.

ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಯಾವುದೇ ತಾರತಮ್ಯ ಅಥವಾ ಪೂರ್ವಾಗ್ರಹವಿಲ್ಲದೆ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ರಾಜ್ಯವು ಬದ್ಧವಾಗಿದೆ ಎಂದು ಪತ್ರವನ್ನು ನೆನಪಿಸಿಕೊಳ್ಳಲಾಗಿದೆ. ಅವರು ಔಪಚಾರಿಕ ಶಿಕ್ಷಣ ಪಡೆಯಲು ನೆರೆಹೊರೆಯ ಶಾಲೆಗಳಿಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
 
ಮದರಸಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವುದನ್ನು ನಿಲ್ಲಿಸಿದ ಸರ್ಕಾರ
ನವೆಂಬರ್ 2022 ರಂದು, ಕೇಂದ್ರ ಸರ್ಕಾರವು 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಮದ್ರಸಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅನುದಾನವನ್ನು ನಿಲ್ಲಿಸಿತು.RTE ಕಾಯಿದೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ನಡೆಸಲು ಇತ್ತೀಚೆಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದವು. ಉತ್ತರ್ ಪ್ರದೇಶದಲ್ಲಿ ಸುಮಾರು 7,500 ಮದರಸಾಗಳು ನೋಂದಣಿಯಾಗದೇ ಇರುವುದು ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com