ಪ್ರಧಾನಿ ಕಚೇರಿ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ: ಸುಬ್ರಮಣಿಯನ್ ಸ್ವಾಮಿ
ಪ್ರಧಾನ ಮಂತ್ರಿಯವರ ಕಾರ್ಯಾಲಯದ (ಪಿಎಂಒ) ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Published: 09th December 2022 02:45 PM | Last Updated: 09th December 2022 04:47 PM | A+A A-

ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪ್ರಧಾನ ಮಂತ್ರಿಯವರ ಕಾರ್ಯಾಲಯದ (ಪಿಎಂಒ) ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನೇರಮಾತುಗಳಿಂದಲೇ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಇದೀಗ ಮತ್ತೊಮ್ಮೆ ಇಂತಹುದೇ ವಿಚಾರದಿಂದ ಸುದ್ದಿಗೆ ಬಂದಿದ್ದಾರೆ. ಹೌದು.. ಟ್ವಿಟರ್ ನಲ್ಲಿ ಸ್ವಾಮಿ ಮಾಡಿರುವ ಒಂದು ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
English language newspapers tremble at calls from PMO. Thus these newspapers don’t cover newsworthy items of opponents of Modi’s policies. Indian language papers give me good coverage. So far I have not bothered but now for English I will start giving bytes to foreign media also.
— Subramanian Swamy (@Swamy39) December 9, 2022
‘ಪಿಎಂಒ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ. ಹೀಗಾಗಿ ಈ ಪತ್ರಿಕೆಗಳು ಪ್ರಧಾನಿ ಮೋದಿಯವರ ನೀತಿಗಳನ್ನು ವಿರೋಧಿಸುವವರ ಅರ್ಹವಾದ ವಿಷಯಗಳನ್ನು (ಸುದ್ದಿಗಳನ್ನು) ವರದಿ ಮಾಡುವುದಿಲ್ಲ. ದೇಶದಲ್ಲಿ ಹಲವು ಭಾಷಾ ಪತ್ರಿಕೆಗಳು ನನಗೆ ಉತ್ತಮ ಕವರೇಜ್ ನೀಡುತ್ತಿದ್ದು, ಇಲ್ಲಿಯವರೆಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೆ, ಈಗ ಇಂಗ್ಲಿಷ್‌ಗಾಗಿ ನಾನು ವಿದೇಶಿ ಮಾಧ್ಯಮಗಳಿಗೂ ಬೈಟ್‌ಗಳನ್ನು ನೀಡಲು ಪ್ರಾರಂಭಿಸುತ್ತೇನೆ’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷ ನವೆಂಬರ್ ವೇಳೆಗೆ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆ: ಸುಬ್ರಮಣಿಯನ್ ಸ್ವಾಮಿ
ಮಾದಕ ವಸ್ತುಗಳ ಕಳ್ಳಸಾಗಣೆ ತಡೆದರೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬಹುದು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸ್ವಾಮಿ, ‘ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಗೃಹ ಸಚಿವರು ಏನು ಮಾಡಿದ್ದಾರೆ? ಅಥವಾ ಈ ಮೂಲಕ ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಶಾ ಅವರನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: ಕೇಂದ್ರಕ್ಕೆ ಮತ್ತೆ 'ಸ್ವಾಮಿ' ಸಂಕಷ್ಟ; ಬ್ಯಾಂಕಿಂಗ್ ಹಗರಣಗಳ ಸಂಬಂಧ ಸಿಬಿಐ, ಆರ್‌ಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ!
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸುಬ್ರಮಣಿಯನ್ ಸ್ವಾಮಿ ಅವರು ಸದಾ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಸ್ವಾಮಿ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಿಂದ ಕೆಲವು ವ್ಯವಹಾರಗಳ ಪ್ರವರ್ತಕರಿಗೆ ಕನಿಷ್ಠ ಸಾರ್ವಜನಿಕ ಷೇರುದಾರರ (ಎಂಪಿಎಸ್) ನಿಯಮಗಳು ಮತ್ತು ವಿಭಿನ್ನ ವರ್ತನೆಗಳ ಅಸಂಗತತೆಯ ಕುರಿತು ಆರೋಪಿಸಿದ್ದರು.