ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿಯಿಂದ ಮಹಾರಾಷ್ಟ್ರದ ಗ್ರಾಮಗಳ ಮಾರಾಟ: ಉದ್ಧವ್ ಠಾಕ್ರೆ
ಕರ್ನಾಟಕ ಚುನಾವಣೆಗಾಗಿ ಬಿಜೆಪಿ, ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 09th December 2022 12:56 PM | Last Updated: 09th December 2022 01:28 PM | A+A A-

ಉದ್ಧವ್ ಠಾಕ್ರೆ
ಮುಂಬಯಿ: ಕರ್ನಾಟಕ ಚುನಾವಣೆಗಾಗಿ ಬಿಜೆಪಿ, ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷ ಕರ್ನಾಟಕವಿಧಾನಸಭೆ ಚುನಾವಣೆಗೆ ಮುನ್ನ ಮಹಾರಾಷ್ಟ್ರದಿಂದ ಗುಜರಾತ್‌ಗೆ ದೊಡ್ಡ ಮೊತ್ತದ ಯೋಜನೆಗಳನ್ನು ಸ್ಥಳಾಂತರಿಸಿದಂತೆಯೇ, ಚುನಾವಣೆ ನಡೆಯುವ ಕರ್ನಾಟಕದಲ್ಲಿ ರಾಜ್ಯದ ಗ್ರಾಮಗಳನ್ನು ವಿಲೀನಗೊಳಿಸಬಹುದು ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ, ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ‘ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರುವ ಅವರು, ‘ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಗಳನ್ನೆಲ್ಲಾ ಕಸಿದು ಗುಜರಾತ್‌ಗೆ ಕೊಟ್ಟಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ವೇಳೆಯಲ್ಲಿ ಗುಜರಾತ್‌ನ ಸ್ಥಿತಿಗತಿ ಹಾಗೂ ಮೊರ್ಬಿ ಸೇತುವೆ ದುರಂತದ ಹೊರತಾಗಿಯೂ ಈ ಫಲಿತಾಂಶ ಬಂದಿರುವುದು ಅಚ್ಚರಿಯೇನಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸೇರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಉತ್ಸುಕ..!
‘ಹಲವು ಜಾಗತಿಕ ಸಮಾವೇಶಗಳು ಗುಜರಾತ್‌ನಲ್ಲಿ ನಡೆದವು. ಜಾಗತಿಕ ನಾಯಕರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಪ್ರಧಾನಿ ಮೋದಿಯವರಿಂದಾಗಿ ಇವೆಲ್ಲಾ ಆಗಿದೆ. ಹಲವು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಮಹಾರಾಷ್ಟ್ರದಿಂದ ಕಸಿದು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗಿದೆ. ಸರ್ದಾರ್ ಪಟೇಲರ ಮೂರ್ತಿ, ಪ್ರಧಾನಿ ಮೋದಿಯವರ ಗುಜರಾತ್ ಅಸ್ಮಿತೆ, ಇವೆಲ್ಲಾ ಕಾರಣಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ‘ ಎಂದಿದ್ದಾರೆ.
‘ಮಹಾರಾಷ್ಟ್ರ ಅಭಿವೃದ್ಧಿ ಯೋಜನೆಗಳು ಗುಜರಾತ್‌ಗೆ ಹೋಗಿದ್ದು ಕೂಡ ಬಿಜೆಪಿ ಗೆಲುವಿನಲ್ಲಿ ಪಾತ್ರ ವಹಿಸಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಯೋಜನೆಗಳನ್ನು ಗುಜರಾತ್‌ಗೆ ಮಾರಾಟ ಮಾಡಿದರು. ಈಗ ಕರ್ನಾಟಕ ಚುನಾವಣೆ ಗೆಲ್ಲಲು ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡಲಾಗುತ್ತಿದೆ‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಡಿ ವಿವಾದಕ್ಕೆ ಹೊಸ ತಿರುವು: ಕರ್ನಾಟಕ ಸೇರಲು ಸೊಲ್ಲಾಪುರದ 11 ಗ್ರಾಮ ಪಂಚಾಯತ್‌ಗಳ ನಿರ್ಣಯ!
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾರಾಷ್ಟ್ರವನ್ನು ಅಸ್ಥಿರಗೊಳಿಸುವ ತಂತ್ರವನ್ನು ಬಿಜೆಪಿ ಹೊಂದಿದೆ ಎಂದು ಠಾಕ್ರೆ ಹೇಳಿದ್ದಾರೆ.