ಭಾರತದ 18 ರಾಜ್ಯಗಳಲ್ಲಿ 250 ರೇಬೀಸ್ ಸಾವು ವರದಿ: 32 ಸಾವಿನೊಂದಿಗೆ ಕರ್ನಾಟಕ ಅಗ್ರಸ್ಥಾನ!
ದೇಶದಲ್ಲಿ ರೇಬಿಸ್‌ನಿಂದಾಗಿ 18 ರಾಜ್ಯಗಳಲ್ಲಿ ಸುಮಾರು 250 ಸಾವುಗಳು ವರದಿಯಾಗಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು 32 ಸಾವು ವರದಿಯಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 24 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
Published: 10th December 2022 01:40 AM | Last Updated: 10th December 2022 01:40 AM | A+A A-

ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ರೇಬಿಸ್‌ನಿಂದಾಗಿ 18 ರಾಜ್ಯಗಳಲ್ಲಿ ಸುಮಾರು 250 ಸಾವುಗಳು ವರದಿಯಾಗಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು 32 ಸಾವು ವರದಿಯಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 24 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ತಮಿಳುನಾಡು 22 ಸಾವುಗಳನ್ನು ವರದಿಯಾಗಿದ್ದರೆ, ಕೇರಳ ಮತ್ತು ತೆಲಂಗಾಣದಲ್ಲಿ ತಲಾ 21 ಸಾವುಗಳು ಸಂಭವಿಸಿವೆ. ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶ ಎರಡೂ ಜಿಲ್ಲೆಗಳಲ್ಲಿ ತಲಾ 19 ಸಾವು ದಾಖಲಾಗಿವೆ. ನಂತರದ ಸ್ಥಾನದಲ್ಲಿ ದೆಹಲಿ ಮತ್ತು ಬಿಹಾರ ಎರಡೂ ರಾಜ್ಯಗಳಿದ್ದು ತಲಾ 18 ಸಾವುಗಳು ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ ಪೋಸ್ಟ್-ಎಕ್ಸ್ಪೋಸರ್ ರೋಗನಿರೋಧಕವನ್ನು ನಿರ್ವಹಿಸಿದ ವ್ಯಕ್ತಿಗಳಲ್ಲಿ ಕೆಲವು ಸಾವುಗಳು ಸಂಭವಿಸಿವೆ. ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯಲ್ಲಿ ಪುನರಾವರ್ತಿತ ಗುಣಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕೇರಳದಲ್ಲಿ ಆಂಟಿ ರೇಬೀಸ್ ಲಸಿಕೆ ತೆಗೆದುಕೊಂಡಿದ್ದ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಇನ್ನು ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಕೇರಳದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ರಾಜ್ಯದಲ್ಲಿ ಸುಮಾರು 2 ಮಿಲಿಯನ್ ನಾಯಿ ಕಡಿತ ವರದಿಯಾಗಿತ್ತು. ಹೀಗಾಗಿ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸಿತ್ತು.