ಅಖಿಲೇಶ್ ಯಾದವ್ ಶಿವಪಾಲ್ ಯಾದವ್ ಪ್ಯಾಚ್ ಅಪ್: ಬಿಜೆಪಿಗೆ ಆರಂಭವಾಯ್ತು ಸ್ಲೀಪ್ ಲೆಸ್ ನೈಟ್ಸ್!

ಶಿವಪಾಲ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷ-ಲೋಹಿಯಾ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿಲೀನವು 2024 ರ ದೊಡ್ಡ ಯುದ್ಧಕ್ಕೆ ಮಾತ್ರವಲ್ಲದೆ ಮುಂಬರುವ ನಾಗರಿಕ ಚುನಾವಣೆಗಳಿಗೂ ಬಿಜೆಪಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ
ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್
ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಯಾದವ್

ಲಕ್ನೋ: ಶಿವಪಾಲ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷ-ಲೋಹಿಯಾ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿಲೀನವು 2024 ರ ದೊಡ್ಡ ಯುದ್ಧಕ್ಕೆ ಮಾತ್ರವಲ್ಲದೆ ಮುಂಬರುವ ನಾಗರಿಕ ಚುನಾವಣೆಗಳಿಗೂ ಬಿಜೆಪಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ತನ್ನ ಚಿಹ್ನೆಯ ಮೇಲೆ ಸ್ಪರ್ಧಿಸಲು ಎಸ್‌ಪಿ ನಿರ್ಧರಿಸಿದೆ.

ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ಅಖಿಲೇಶ್-ಶಿವಪಾಲ್ ಒಂದಾಗಿದ್ದಾರೆ.  ಇದೀಗ ಡಿಂಪಲ್ ಯಾದವ್ ಗೆಲುವಿನಿಂದ ಅದು ಮತ್ತಷ್ಟು ಗಟ್ಟಿಗೊಂಡಿದೆ. ಅಖಿಲೇಶ್ ಗುರುವಾರ ಸೈಫೈನಲ್ಲಿ ಶಿವಪಾಲ್ ಅವರಿಗೆ ಪಕ್ಷದ ಧ್ವಜವನ್ನು ಅರ್ಪಿಸಿದ ಕೆಲವೇ ಗಂಟೆಗಳ ನಂತರ, ಅವರ ಮಗ ಆದಿತ್ಯ ತಮ್ಮನ್ನು ಎಸ್ಪಿ ನಾಯಕರೆಂದು ಗುರುತಿಸಿಕೊಳ್ಳಲು ತಮ್ಮ ಟ್ವಿಟರ್ ಖಾತೆಗಳನ್ನು ಬದಲಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದಲ್ಲಿ ಚಾಚಾಜಿಗೆ ದೊಡ್ಡ ಪಾತ್ರ ನೀಡಲಾಗುವುದು ಮತ್ತು ಅವರ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಗೌರವ ನೀಡಲಾಗುವುದು ಎಂದು ಅಖಿಲೇಶ್ ಹೇಳಿದ್ದಾರೆ. ಮೈನ್‌ಪುರಿಯಲ್ಲಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ವಿರುದ್ಧ 2.88 ಲಕ್ಷ ಮತಗಳ ಅಂತರದಿಂದ ಡಿಂಪಲ್ ಗೆಲುವು ಸಾಧಿಸಿದ್ದು, ಅಖಿಲೇಶ್ ಮತ್ತು ಶಿವಪಾಲ್ ನಡುವಿನ ಹೊಂದಾಣಿಕೆಯನ್ನು ಗಟ್ಟಿಗೊಳಿಸಿದೆ.

ಎಸ್‌ಪಿಯೊಂದಿಗೆ ಅವರ ಪಕ್ಷವನ್ನು ವಿಲೀನಗೊಳಿಸುವುದರಿಂದ ಅಖಿಲೇಶ್ ಅವರ ಕೈಗಳನ್ನು ಬಲಪಡಿಸುತ್ತದೆ. 2017ರಲ್ಲಿ ಆರಂಭವಾದ ಕೌಟುಂಬಿಕ ಕಲಹ  ಚಿಕ್ಕಪ್ಪ ಮತ್ತು ಅಣ್ಣನ ಮಗನ  ಚುನಾವಣೆ ಭವಿಷ್ಯದ ಮೇಲೆ ಪರಿಣಾಮ ಬೀರಿತ್ತು, ಇದನ್ನು ಬಿಜೆಪಿ ಬಂಡವಾಳ ಮಾಡಿಕೊಂಡಿತು.

ಶಿವಪಾಲ್ ಇಲ್ಲಿ ಗೌರವಾನ್ವಿತ ಅನುಯಾಯಿಗಳನ್ನು ಹೊಂದಿರುವುದರಿಂದ ಕನೌಜ್, ಫಿರೋಜಾಬಾದ್, ಔರೈಯಾ, ಇಟಾವಾ, ಮೈನ್‌ಪುರಿ ಮತ್ತು ಫರೂಖ್‌ಬಾದ್‌ಗಳನ್ನು ಒಳಗೊಂಡಿರುವ ಈ ಬೆಲ್ಟ್‌ನಲ್ಲಿ ಈ ಪುನರ್ಮಿಲನದ ಲಾಭವನ್ನು ಅಖಿಲೇಶ್ ಪಡೆಯುತ್ತಾರೆ ಎಂದು ರಾಜಕೀಯ ವಿಮರ್ಶಕ ಜೆಪಿ ಶುಕ್ಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com