2024ಕ್ಕೆ ಕೇಂದ್ರದಲ್ಲಿ 'ಪರ್ಯಾಯ' ಸರ್ಕಾರ ರಚನೆಗೆ ಪ್ರತಿಪಕ್ಷಗಳು ಶ್ರಮಿಸುತ್ತಿವೆ: ಅಖಿಲೇಶ್ ಯಾದವ್
2024ಕ್ಕೆ ಕೇಂದ್ರದಲ್ಲಿ ಪ್ರಸ್ತುತ ಸರ್ಕಾರಕ್ಕೆ ಪ್ರತಿಯಾಗಿ 'ಪರ್ಯಾಯ' ಸರ್ಕಾರ ರಚನೆಗೆ ಪ್ರತಿಪಕ್ಷಗಳು ಶ್ರಮಿಸುತ್ತಿವೆ ಮತ್ತು ವಿರೋಧ ಪಕ್ಷದ ನಾಯಕರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್...
Published: 12th December 2022 04:04 PM | Last Updated: 12th December 2022 04:04 PM | A+A A-

ಅಖಿಲೇಶ್ ಯಾದವ್
ನವದೆಹಲಿ: 2024ಕ್ಕೆ ಕೇಂದ್ರದಲ್ಲಿ ಪ್ರಸ್ತುತ ಸರ್ಕಾರಕ್ಕೆ ಪ್ರತಿಯಾಗಿ 'ಪರ್ಯಾಯ' ಸರ್ಕಾರ ರಚನೆಗೆ ಪ್ರತಿಪಕ್ಷಗಳು ಶ್ರಮಿಸುತ್ತಿವೆ ಮತ್ತು ವಿರೋಧ ಪಕ್ಷದ ನಾಯಕರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಮಾಜಿ ಸಿಎಂ, ಹಣದುಬ್ಬರ ಉತ್ತುಂಗದಲ್ಲಿದ್ದು, ನಿರುದ್ಯೋಗ ಹೆಚ್ಚುತ್ತಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಲ್ಲ ಭಾರತೀಯರಿಗೆ ನೀಡಿದ್ದ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದರಿಂದ ಕೇಂದ್ರದಲ್ಲಿ 'ಪರ್ಯಾಯ' ಸರ್ಕಾರ ರಚನೆ ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದನ್ನು ಓದಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಪ್ರಾಮುಖ್ಯತೆಯಿಲ್ಲ: ಬಿಹಾರ ಸಿಎಂ ನಿತೀಶ್ ಕುಮಾರ್
"2024ಕ್ಕೆ ಪರ್ಯಾಯ ಸರ್ಕಾರ ರಚಿಸಲು ನಿರಂತರ ಕಸರತ್ತು ನಡೆಯುತ್ತಿದೆ. ನಿತೀಶ್‌ಜಿ, ಮಮತಾಜಿ ಮತ್ತು ಕೆಸಿಆರ್ ಸಾಹೆಬ್ ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಹಣದುಬ್ಬರ ಉತ್ತುಂಗದಲ್ಲಿರುವಾಗ ಪರ್ಯಾಯ ಸರ್ಕಾರದ ಅಗತ್ಯವಿದೆ" ಎಂದು ಯಾದವ್ ಹೇಳಿದರು.
'ಉತ್ತರ ಪ್ರದೇಶದ ಜನರಿಗೆ ದ್ರೋಹ ಮಾಡಲಾಗಿದೆ. ಉತ್ತರ ಪ್ರದೇಶವು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿರಬೇಕು. ಆದರೆ ಈಗ ಎಲ್ಲಿದೆ?' ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಉತ್ತರ ಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿರುವ ಅವರ ಪತ್ನಿ ಡಿಂಪಲ್ ಯಾದವ್ ಸೋಮವಾರ ಸದನದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.