ಸಂಸದರು ಯಾರೊಬ್ಬರ ಜಾತಿ, ಧರ್ಮ ಉಲ್ಲೇಖಿಸಿದರೆ ಕ್ರಮ: ಸ್ಪೀಕರ್ ಓಂ ಬಿರ್ಲಾ

ಸದನದಲ್ಲಿ ಯಾರೊಬ್ಬರ ಜಾತಿ ಮತ್ತು ಧರ್ಮವನ್ನು ಉಲ್ಲೇಖಿಸದಂತೆ  ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಸ್ಪೀಕರ್ ಓಂ ಬಿರ್ಲ
ಸ್ಪೀಕರ್ ಓಂ ಬಿರ್ಲ

ನವದೆಹಲಿ: ಸದನದಲ್ಲಿ ಯಾರೊಬ್ಬರ ಜಾತಿ ಮತ್ತು ಧರ್ಮವನ್ನು ಉಲ್ಲೇಖಿಸದಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

ತಾವು ಕೆಳಜಾತಿಗೆ ಸೇರಿದವರಾಗಿರುವುದರಿಂದ ಹಿಂದಿಯಲ್ಲಿ ತಮ್ಮ ಪ್ರಾವೀಣ್ಯತೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಆರೋಪಿಸಿದ ನಂತರ ಓಂ ಬಿರ್ಲಾ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಆರ್ ರೆಡ್ಡಿ ಅವರು ತಮ್ಮ ಜಾತಿಯನ್ನು ಉಲ್ಲೇಖಿಸಿ ಬಳಸಿರುವ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಜನರು ತಮ್ಮ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಂಸದರನ್ನು ಲೋಕಸಭೆಗೆ ಆಯ್ಕೆ ಮಾಡಿಲ್ಲ ಎಂದು ಹೇಳಿದರು.

ಇಲ್ಲಿ ಯಾರೇ ಆಗಲಿ ಸದನದಲ್ಲಿ ಇಂತಹ ಪದಗಳನ್ನು ಬಳಸಬಾರದು. ಇಲ್ಲವಾದರೆ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದರು.

"ನೀವು ಸಭಾನಾಯಕರು. ನೀಮ್ಮ ಪಕ್ಷದ ಸದಸ್ಯರು ಭವಿಷ್ಯದಲ್ಲಿ ಇಂತಹ ತಪ್ಪು ಮಾಡದಂತೆ ಅವರಿಗೆ ಸೂಚಿಸಿ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಜೌಧರಿ ಅವರಿಗೆ ಹೇಳಿದರು.

ಇನ್ನು ರೆಡ್ಡಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಾಂಗ್ರೆಸ್ ಸದಸ್ಯರು ದುರ್ಬಲ ಹಿಂದಿಯಲ್ಲಿ ಕೇಳಿದ ಪ್ರಶ್ನೆಗೆ ತಾವೂ ದುರ್ಬಲ ಹಿಂದಿಯಲ್ಲಿ ಉತ್ತರ ನೀಡುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com