ಮಾಂಡೌಸ್ ಕ್ಷೀಣಿಸಿದ ಬೆನ್ನಲ್ಲೇ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ: ಐಎಂಡಿ ಮುನ್ಸೂಚನೆ

ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತ ಕ್ಷೀಣಿಸಿದ ಬೆನ್ನಲ್ಲೆ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಎದುರಾಗಲಿದೆ ಎಂದು ಹವಾಮನ ಇಲಾಖೆ ಮುನ್ಸೂಚನೆ ನೀಡಿದೆ. 
ಚಂಡಮಾರುತ (ಸಂಗ್ರಹ ಚಿತ್ರ)
ಚಂಡಮಾರುತ (ಸಂಗ್ರಹ ಚಿತ್ರ)

ನವದೆಹಲಿ: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತ ಕ್ಷೀಣಿಸಿದ ಬೆನ್ನಲ್ಲೆ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಎದುರಾಗಲಿದೆ ಎಂದು ಹವಾಮನ ಇಲಾಖೆ ಮುನ್ಸೂಚನೆ ನೀಡಿದೆ. 

ಡಿ.13 ರಂದು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಸ್ಥಿತಿ ಉಂಟಾಗುತ್ತಿದೆ. ಈ ಚಂಡಮಾರುತ  ಪಶ್ಚಿಮ-ವಾಯುವ್ಯಕ್ಕೆ ಚಲಿಸಿ ಅಲ್ಲಿಂದ ಭಾರತೀಯ ಕರಾವಳಿಯಿಂದ ಮುಂದಕ್ಕೆ ಹೋಗುತ್ತದೆ.

ಇದರ ಪರಿಣಾಮವಾಗಿ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ಡಿ.14 ಹಾಗೂ 15 ರಂದು ಬೃಹತ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.

ಇಂದು ತಮಿಳುನಾಡು, ಕೇರಳಗಳಲ್ಲಿ ಮಧ್ಯಮ ಹಾಗೂ ಲಘು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರ ಕೇರಳ-ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಗಾಳಿ ಆಗ್ನೇಯ ಭಾಗದಲ್ಲಿ ಗಂಟೆಗೆ 35-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com