ಪಶ್ಚಿಮ ಬಂಗಾಳ: ಕೇವಲ 10 ರೂಪಾಯಿಗಾಗಿ ಸ್ನೇಹಿತನ ಬರ್ಬರ ಹತ್ಯೆ!
ಕೇವಲ 10 ರೂಪಾಯಿಗಾಗಿ 20 ವರ್ಷದ ಯುವಕನನನ್ನು ಆತನ ಸ್ನೇಹಿತನೇ ಕಲ್ಲಿನಿಂದ ಹೊಡೆದು ಸಾಯಿಸಿರುವ ಘಟನೆ ಉತ್ತರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಯುವಕ ರಾಮ ಪ್ರಸಾದ್ ಸಾಹನ ಮೃತದೇಹ ಬೈಕುಂಠಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 15th December 2022 12:29 PM | Last Updated: 15th December 2022 12:46 PM | A+A A-

ಸಾಂದರ್ಭಿಕ ಚಿತ್ರ
ಸಿಲಿಗುರಿ: ಕೇವಲ 10 ರೂಪಾಯಿಗಾಗಿ 20 ವರ್ಷದ ಯುವಕನನನ್ನು ಆತನ ಸ್ನೇಹಿತನೇ ಕಲ್ಲಿನಿಂದ ಹೊಡೆದು ಸಾಯಿಸಿರುವ ಘಟನೆ ಉತ್ತರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಯುವಕ ರಾಮ ಪ್ರಸಾದ್ ಸಾಹನ ಮೃತದೇಹ ಬೈಕುಂಠಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹ ಮಾದಕ ವ್ಯಸನಿಯಾಗಿದ್ದು, ತನ್ನ ಅಗತ್ಯ ಪೂರೈಸಿಕೊಳ್ಳಲು ಅರಣ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆತ ಸೋಮವಾರ ತಮ್ಮ ಸ್ನೇಹಿತರಾದ ಸುಬ್ರಾತಾ ದಾಸ್ (22) ಮತ್ತು ಅಜಯ್ ರಾಯ್ (24) ಅವರೊಂದಿಗೆ ಕಾಡಿಗೆ ಹೋಗಿದ್ದಾನೆ. ಅವರೆಲ್ಲರೂ ಕೂಡಾ ಮಾದಕ ವ್ಯಸನಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಶೆ ಹೇರಿದಾಗ ಮತ್ತಷ್ಟು ಡ್ರಗ್ಸ್ ಖರೀದಿಗೆ 10 ರೂ. ಕೊಡುವಂತೆ ಸುಬ್ರಾತ್ ನನ್ನು ಸಾಹು ಕೇಳಿದ್ದಾನೆ. ಕೂಡಲೇ ಜಗಳ ಆರಂಭವಾಗಿದ್ದು, ಸುಬ್ರಾತ್ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಸಿಲಿಗುರಿ ಮೆಟ್ರೋ ಪೊಲೀಸ್ ವ್ಯಾಪ್ತಿಯ ಅಶಿಘರ್ ಔಟ್‌ಪೋಸ್ಟ್‌ನ ಅಧಿಕಾರಿಗಳು ಬುಧವಾರ ರಾತ್ರಿ ಸುಬ್ರಾತಾ ಮತ್ತು ಅಜಯ್‌ನನ್ನು ಬಂಧಿಸಿದ್ದು, ಪ್ರಕರಣವನ್ನು ಭೇದಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.