ಬಣ್ಣವು ನಂಬಿಕೆ, ಜಾತಿಯನ್ನು ಹೇಗೆ ನಿರ್ಧರಿಸುತ್ತದೆ?: 'ಪಠಾಣ್' ಕೇಸರಿ ಬಣ್ಣ ವಿವಾದ ಬಗ್ಗೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಆಕ್ರೋಶ

ಶಾರೂಕ್ ಖಾನ್ -ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಹಾಡಿನ ವಿವಾದದ ನಡುವೆ, ಬೇಷರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ವೇಷಭೂಷಣದ ಆಧಾರದ ಮೇಲೆ ಪ್ರತಿಭಟಿಸುತ್ತಿದ್ದವರ ವಿರುದ್ಧ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಾಗ್ದಾಳಿ ನಡೆಸಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್

ರಾಯ್ಪುರ: ಶಾರೂಕ್ ಖಾನ್ -ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಹಾಡಿನ ವಿವಾದದ ನಡುವೆ, ಬೇಷರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ವೇಷಭೂಷಣದ ಆಧಾರದ ಮೇಲೆ ಪ್ರತಿಭಟಿಸುತ್ತಿದ್ದವರ ವಿರುದ್ಧ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಾಗ್ದಾಳಿ ನಡೆಸಿದ್ದಾರೆ.

ಕೇಸರಿ ಬಣ್ಣವನ್ನು ಅಳವಡಿಸಿಕೊಳ್ಳುವ ಸಾಧುಗಳು ಅಥವಾ ಸಂತರು ತಮ್ಮ ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಅವರು ಮನೆ, ಕುಟುಂಬ ಮತ್ತು ಸಮಾಜವನ್ನು ತ್ಯಜಿಸಿ ನಂತರ ಕೇಸರಿ ನಿಲುವಂಗಿಯನ್ನು ಅಳವಡಿಸಿಕೊಳ್ಳುತ್ತಾರೆ. ಕುಂಕುಮ ಹಚ್ಚಿಕೊಂಡು ತಿರುಗಾಡುವ ಈ ಭಜರಂಗಿ ಗೂಂಡಾಗಳು ಜನರಿಗಾಗಿ ಅಥವಾ ಸಮಾಜಕ್ಕಾಗಿ ಏನು ಮಾಡಿದ್ದಾರೆ. ಬದಲಿಗೆ ಕೇಸರಿ ಬಣ್ಣದ ಉಡುಪಿನಲ್ಲಿ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಇತ್ತೀಚೆಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣ ಬಟ್ಟೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಲವಾರು ಬಲಪಂಥೀಯ ನಾಯಕರು ಚಲನಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ. ಉಡುಪಿನ ಬಣ್ಣ ಯಾರ ಜಾತಿ ಅಥವಾ ಧರ್ಮವನ್ನು ಗುರುತಿಸುವ ಆಧಾರವಾಗಿರಬಾರದು ಎಂದು ಬಾಘೆಲ್ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಸಹಾಯಕನ ನ್ಯಾಯಾಂಗ ಬಂಧನ ಜನವರಿ 2ರವರೆಗೆ ವಿಸ್ತರಣೆ
ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಸೋಮವಾರ ಛತ್ತೀಸ್‌ಗಢ ಸಿಎಂ ಸೆಕ್ರೆಟರಿಯೇಟ್‌ನಲ್ಲಿ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ ಅವರ ನ್ಯಾಯಾಂಗ ಬಂಧನವನ್ನು ಜನವರಿ 2ರವರೆಗೆ ಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿದ ನಂತರ ರಾಜ್ಯ ಸರ್ಕಾರವು ಅವರನ್ನು ಅಮಾನತುಗೊಳಿಸಿತ್ತು. ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತು ನಂತರ ನ್ಯಾಯಾಂಗ ಬಂಧನದ ಅಡಿಯಲ್ಲಿ ಜೈಲಿಗೆ ಕಳುಹಿಸಲಾಯಿತು. ತನಿಖೆ ಮತ್ತು ಇಲ್ಲಿಯವರೆಗೆ ಪಡೆದುಕೊಂಡಿರುವ ಮಾಹಿತಿಯ ಆಧಾರದ ಮೇಲೆ, ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸುವಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ" ಎಂದು ಇಡಿ ವಕೀಲ ಸೌರಭ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com