ಛತ್ತೀಗಢದಿಂದ ಅಪಹರಿಸಿ ಹರಿಯಾಣದ ವ್ಯಕ್ತಿಗೆ ಮಾರಾಟ; ಬಾಲಕಿ ಮೇಲೆ ಅತ್ಯಾಚಾರ, ಏಳು ಮಂದಿಯ ಬಂಧನ

ಈ ವರ್ಷದ ಅಕ್ಟೋಬರ್‌ನಲ್ಲಿ ಛತ್ತೀಸಗಢದ ಕೊರಿಯಾ ಜಿಲ್ಲೆಯಿಂದ 15 ವರ್ಷದ ಬಾಲಕಿಯನ್ನು ಅಪಹರಿಸಿ ಹರಿಯಾಣ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದು, ಆತ ಬಾಲಕಿ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರ್ಬಾ: ಈ ವರ್ಷದ ಅಕ್ಟೋಬರ್‌ನಲ್ಲಿ ಛತ್ತೀಸಗಢದ ಕೊರಿಯಾ ಜಿಲ್ಲೆಯಿಂದ 15 ವರ್ಷದ ಬಾಲಕಿಯನ್ನು ಅಪಹರಿಸಿ ಹರಿಯಾಣ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದು, ಆತ ಬಾಲಕಿ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಜಿಲ್ಲೆಯ ಪಾಟ್ನಾ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾದ ಎರಡು ತಿಂಗಳ ನಂತರ ಸಂತ್ರಸ್ತೆಯನ್ನು ಸೋನಿಪತ್ (ಹರಿಯಾಣ) ನಿಂದ ರಕ್ಷಿಸಿದ ನಂತರ ಈ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕಿ (ಕೊರಿಯಾ) ಕವಿತಾ ಠಾಕೂರ್ ತಿಳಿಸಿದ್ದಾರೆ.

'ಅಕ್ಟೋಬರ್ 11 ರಂದು ತನ್ನ ಕುಟುಂಬದೊಂದಿಗೆ ದಸರಾ ಹಬ್ಬದ ಆಚರಣೆ ಮಾಡಲು ಹೋದಾಗ ಬಾಲಕಿಯನ್ನು ಅಪಹರಿಸಲಾಗಿತ್ತು' ಎಂದು ಅವರು ಹೇಳಿದರು.

ಠಾಕೂರ್ ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆ ಸಮಯದಲ್ಲಿ, ಹಲವಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಸಂತ್ರಸ್ತೆ ಇರುವ ಸ್ಥಳದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಪೊಲೀಸರ ತಂಡವನ್ನು ಹರಿಯಾಣಕ್ಕೆ ಕಳುಹಿಸಲಾಯಿತು. ಅಲ್ಲಿಂದ ಬಾಲಕಿಯನ್ನು ರಕ್ಷಿಸಿ ಕರೆತರಲಾಗಿದೆ ಎಂದು ಅವರು ಹೇಳಿದರು.

ಬಾಲಕಿಯನ್ನು ಅಪಹರಿಸಿ 35ರ ಹರೆಯದ ವ್ಯಕ್ತಿಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಠಾಕೂರ್ ಹೇಳಿದ್ದಾರೆ.
ಸೋನಿಪತ್‌ನ ವ್ಯಕ್ತಿಯನ್ನು ಹೊರತುಪಡಿಸಿ, ಛತ್ತೀಸ್‌ಗಢದ ಕೊರಿಯಾದಿಂದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು, ಇಬ್ಬರು ಕೊರ್ಬಾದಿಂದ ಮತ್ತು ಒಬ್ಬರನ್ನು ಸೂರಜ್‌ಪುರದಿಂದ  ಮಂಗಳವಾರ ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com