ಕೋವಿಡ್ ಭೀತಿ ಬೆನ್ನಲ್ಲೇ ಕೇರಳದ ಹಕ್ಕಿ ಜ್ವರದ ಆರ್ಭಟ, 6,000 ಕ್ಕೂ ಕೋಳಿಗಳ ಸಾವು!

ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಅಬ್ಬರಿಸುತ್ತಿರುವ ಹೊತ್ತಿನಲ್ಲೇ ಇತ್ತ ಕೇರಳದಲ್ಲಿ ಹಕ್ಕಿಜ್ವರ ಭಾರಿ ಸದ್ದು ಮಾಡುತ್ತಿದ್ದು, ಸೋಂಕಿಗೆ ತುತ್ತಾಗಿದ್ದ ಬರೊಬ್ಬರಿ 6 ಸಾವಿರಕ್ಕೂ ಅಧಿಕ ಕೋಳಿ ಮತ್ತು ಪಕ್ಷಿಗಳನ್ನು ಕೊಲ್ಲಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಟ್ಟಾಯಂ: ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಅಬ್ಬರಿಸುತ್ತಿರುವ ಹೊತ್ತಿನಲ್ಲೇ ಇತ್ತ ಕೇರಳದಲ್ಲಿ ಹಕ್ಕಿಜ್ವರ ಭಾರಿ ಸದ್ದು ಮಾಡುತ್ತಿದ್ದು, ಸೋಂಕಿಗೆ ತುತ್ತಾಗಿದ್ದ ಬರೊಬ್ಬರಿ 6 ಸಾವಿರಕ್ಕೂ ಅಧಿಕ ಕೋಳಿ ಮತ್ತು ಪಕ್ಷಿಗಳನ್ನು ಕೊಲ್ಲಲಾಗಿದೆ.

ಹೌದು.. ಕೇರಳದ ಕೊಟ್ಟಾಯಂ ಜಿಲ್ಲೆಯ ಮೂರು ಪ್ರತ್ಯೇಕ ಪಂಚಾಯತ್‌ಗಳಲ್ಲಿ ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇಲ್ಲಿ ಸುಮಾರು 6,000 ಕ್ಕೂ ಹೆಚ್ಚು ಕೋಳಿ ಮತ್ತು ಪಕ್ಷಿಗಳನ್ನು ಕೊಲ್ಲಲಾಗಿದೆ. ಕೊಟ್ಟಾಯಂ ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 6,017 ಪಕ್ಷಿಗಳು, ಹೆಚ್ಚಾಗಿ ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಪ್ರಕಟಣೆ ತಿಳಿಸಿದೆ.

ಬರ್ಡ್ ಫ್ಲೂ ಅಥವಾ ಏವಿಯನ್ ಇನ್ಫ್ಲುಯೆನ್ಸ, ಹೆಚ್ಚು ಸಾಂಕ್ರಾಮಿಕ ಝೂನೋಟಿಕ್ ಕಾಯಿಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಏತನ್ಮಧ್ಯೆ, ಲಕ್ಷದ್ವೀಪ ಆಡಳಿತವು ಇದೀಗ ಕೇರಳದಲ್ಲಿ ಹಕ್ಕಿಜ್ವರದ ಹರಡುವಿಕೆಯ ವರದಿಯಿಂದಾಗಿ ಮುಖ್ಯ ಭೂಭಾಗದಿಂದ ದ್ವೀಪಗಳಿಗೆ ಕೋಳಿ ರಫ್ತನ್ನು ನಿಷೇಧಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com