ಛತ್ತೀಸ್‌ಗಢ: ಮರಣದ ನಂತರದ ಆಚರಣೆಗಾಗಿ ತಯಾರಿಸಲಾದ ಉಳಿದ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮರಣದ ನಂತರದ ಆಚರಣೆಗಾಗಿ ತಯಾರಿಸಲಾದ ಉಳಿದ ಆಹಾರವನ್ನು ಸೇವಿಸಿದ ನಂತರ ನಲವತ್ತು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೊರ್ಬಾ: ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮರಣದ ನಂತರದ ಆಚರಣೆಗಾಗಿ ತಯಾರಿಸಲಾದ ಉಳಿದ ಆಹಾರವನ್ನು ಸೇವಿಸಿದ ನಂತರ ನಲವತ್ತು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸಂತ್ರಸ್ತರು, ರಾಮಾನುಜನಗರ ಅಭಿವೃದ್ಧಿ ಬ್ಲಾಕ್‌ನ ವಿಶುನ್‌ಪುರ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಆಹಾರವನ್ನು ಸೇವಿಸಿದ್ದಾರೆ ಎಂದು ಸೂರಜ್‌ಪುರ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ.ಆರ್.ಎಸ್.ಸಿಂಗ್ ತಿಳಿಸಿದ್ದಾರೆ.

ನಂತರ ಅವರೆಲ್ಲರನ್ನೂ ಸೂರಜ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಶನಿವಾರ ಸಂಜೆ 'ದಸ್ಗಾತ್ರ' (ವ್ಯಕ್ತಿಯ ಮರಣದ ನಂತರ ಹತ್ತನೇ ದಿನದ ಆಚರಣೆ) ಗಾಗಿ ತಯಾರಿಸಿದ್ದ ಉಳಿದ ಆಹಾರವನ್ನು ಸೇವಿಸಿದ್ದಾರೆ ಎಂದು ಸಿಎಂಎಚ್‌ಒ ತಿಳಿಸಿದ್ದಾರೆ.

ಆಹಾರವನ್ನು ಸೇವಿಸಿದ ಎರಡು-ಮೂರು ಗಂಟೆಗಳ ನಂತರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 40 ಜನರು ಅಸ್ವಸ್ಥರಾಗಿದ್ದಾರೆ ಮತ್ತು ಫುಡ್ ಪಾಯಿಸನಿಂಗ್‌ನಂತಹ ಲಕ್ಷಣಗಳ ಬಗ್ಗೆ ದೂರು ನೀಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com