ರಾಹುಲ್ ಗಾಂಧಿ 'ಅತಿಮಾನುಷ' ವ್ಯಕ್ತಿ': ಕಾಂಗ್ರೆಸ್ ಮಾಜಿ ಅಧ್ಯಕ್ಷನನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು "ಅತಿಮಾನುಷ" ಮತ್ತು "ತಪಸ್ಸು ಮಾಡುವ ಯೋಗಿ" ಎಂದು ಬಣ್ಣಿಸಿದ್ದಾರೆ.
ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್

ಮೊರಾದಾಬಾದ್: ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು "ಅತಿಮಾನುಷ" ಮತ್ತು "ತಪಸ್ಸು ಮಾಡುವ ಯೋಗಿ" ಎಂದು ಬಣ್ಣಿಸಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ್ದಾರೆ.

ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಭರತ್‌ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್, “ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ. ನಾವು ಚಳಿಯಲ್ಲಿ ಹೆಪ್ಪುಗಟ್ಟುತ್ತಿದ್ದೇವೆ ಮತ್ತು ಚಳಿಯಿಂದ ರಕ್ಷಣೆ ಪಡೆಯಲು ಜಾಕೆಟ್‌ಗಳನ್ನು ಧರಿಸುತ್ತಿರುವಾಗ ಅವರು ಮಾತ್ರ ಕೇವಲ ಟೀ ಶರ್ಟ್‌ನಲ್ಲಿ (ಭಾರತ್ ಜೋಡೋಗಾಗಿ ಹೊರಡುತ್ತಿದ್ದಾರೆ. ಯಾತ್ರಾ)ಯೋಗಿಯಂತೆ ನಡೆಯುತ್ತಿದ್ದಾರೆ. ಅವರು ತಮ್ಮ 'ತಪಸ್ಸನ್ನು' ಗಮನದಲ್ಲಿಟ್ಟುಕೊಂಡು ಯಾತ್ರೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಭಗವಾನ್ ರಾಮನ ಪಾದುಕೆ ತುಂಬಾ ದೂರ ಸಾಗುತ್ತದೆ. ಕೆಲವೊಮ್ಮೆ ಶ್ರೀರಾಮ ತಲುಪಲು ಸಾಧ್ಯವಾಗದ ಕಡೆ ಆತನ ಸಹೋದರ ಭರತ್‌ ಪಾದುಕೆಯನ್ನು ತೆಗೆದುಕೊಂಡು ಹೋಗುತ್ತಾನೆ. ಅದರಂತೆ ನಾವು ಸಹ ಉತ್ತರ ಪ್ರದೇಶಕ್ಕೆ 'ಪಾದುಕೆ'ಯನ್ನು ಹೊತ್ತೊಯ್ದಿದ್ದೇವೆ. ಈಗ 'ಪಾದುಕೆ' ಉತ್ತರ ಪ್ರದೇಶವನ್ನು ತಲುಪಿದೆ. ರಾಮ್ ಜಿ(ರಾಹುಲ್ ಗಾಂಧಿ) ಕೂಡ ಬರುತ್ತಾರೆ, ಇದು ನಮ್ಮ ನಂಬಿಕೆ" ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇದುವರೆಗೂ ಉತ್ತರ ಪ್ರದೇಶದಲ್ಲಿ ಸಾಗದಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com