ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)

ಕೇರಳ: 17 ವರ್ಷದ ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿದ ಪ್ರೇಮಿ

ಕೇರಳದಲ್ಲಿ ವ್ಯಕ್ತಿಯೋರ್ವ 17 ವರ್ಷದ ತನ್ನ ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. 

ತಿರುವನಂತಪುರಂ: ಕೇರಳದಲ್ಲಿ ವ್ಯಕ್ತಿಯೋರ್ವ 17 ವರ್ಷದ ತನ್ನ ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. 

ತನ್ನ ಪ್ರೇಯಸಿ ತನಗೆ ದ್ರೋಹ ಬಗೆಯುತ್ತಿದ್ದಾಳೆ ಎಂದು ಭಾವಿಸಿದ ವ್ಯಕ್ತಿ ಆಕೆಯನ್ನು ಹತ್ಯೆ ಮಾಡಿದ್ದು ಈ ಘಟನೆ ವರ್ಕಲದ ಬಳಿಯ ವಡೆಸ್ಸೆರಿಕೋಣಂ ನಲ್ಲಿ ನಡೆದಿದೆ. 17 ವರ್ಷದ ಸಂಗೀತಾ ಮೃತ ದುರ್ದೈವಿಯಾಗಿದ್ದು,  ಗೋಪು ಎಂಬಾತ ಈ ಕುಕೃತ್ಯ ಎಸಗಿದ್ದಾನೆ. ಸಂಗೀತಾಳನ್ನು ತನ್ನ ಮನೆಯಿಂದ ಹೊರಗೆ ಕರೆದ ವ್ಯಕ್ತಿ, ಆಕೆ ಬಂದೊಡನೆ ಚಾಕು ತೆಗೆದುಕೊಂಡು ಕತ್ತು ಸೀಳಿದ್ದಾನೆ.
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಯುವತಿ ತಕ್ಷಣವೇ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ, ಆಕೆಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಮಾರ್ಗ ಮಧ್ಯೆಯೇ ಯುವತಿ ಮೃತಪಟ್ಟಿದ್ದಳು. 

ಪ್ರಾಥಮಿಕ ಮಾಹಿತಿಯ ಪ್ರಕಾರ ಸಂಗೀತ ಗೋಪು ಎಂಬಾತನನ್ನು ಪ್ರೀತಿಸುತ್ತಿದ್ದಳು, ಆದರೆ ಇತ್ತೀಚಿನ ದಿನಗಳಲ್ಲಿ ಆತ ಆಕೆಯನ್ನು ಅನುಮಾನಿಸತೊಡಗಿದ್ದ. ಸಂಗೀತಳನ್ನು ಪರೀಕ್ಷಿಸಲು ಗೋಪು ಬೇರೊಂದು ಮೊಬೈಲ್ ನಿಂದ ಬೇರೊಬ್ಬ ಯುವಕನ ರೀತಿಯಲ್ಲಿ ಮಾತನಾಡತೊಡಗಿದ್ದ, ಇದನ್ನರಿಯದ ಸಂಗೀತ ಹೊಸ ಹುಡುಗನೊಂದಿಗೆ ನಿರಂತರವಾಗಿ ಮಾತನಾಡಲು ಪ್ರಾರಂಭಿಸಿದ್ದಳು. 

ಮತ್ತೋರ್ವನಂತೆ ನಟಿಸುತ್ತಿದ್ದ ಗೋಪು ಆಕೆಯನ್ನು ಮನೆಯಿಂದ ಹೊರಗೆ ಬರುವಂತೆ ಕೇಳಿದ್ದಾನೆ. ಆಕೆ ಬಂದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ ಈ ವೇಳೆ ಗೋಪು ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

Related Stories

No stories found.

Advertisement

X
Kannada Prabha
www.kannadaprabha.com