ಡಿಎಂಕೆ ಮಾಜಿ ಸಂಸದ ಮಸ್ತಾನ್ ರನ್ನು ಹತ್ಯೆ ಮಾಡಲಾಗಿದೆ: ನಿಧನವಾದ 10 ದಿನಗಳ ನಂತರ ಪೊಲೀಸರು

ಡಿಎಂಕೆ ಮಾಜಿ ಸಂಸದ ಮಸ್ತಾನ್ ಅವರು ನಿಧನವಾದ 10 ದಿನಗಳ ನಂತರ, ಅದು ಸಹಜ ಸಾವು ಅಲ್ಲ. ಕೊಲೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಮಸ್ತಾನ್
ಮಸ್ತಾನ್

ಚೆನ್ನೈ: ಡಿಎಂಕೆ ಮಾಜಿ ಸಂಸದ ಮಸ್ತಾನ್ ಅವರು ನಿಧನವಾದ 10 ದಿನಗಳ ನಂತರ, ಅದು ಸಹಜ ಸಾವು ಅಲ್ಲ. ಕೊಲೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

ಡಿಸೆಂಬರ್ 22 ರಂದು, ಮಸ್ತಾನ್ ಅವರು ತಿರುಚ್ಚಿಗೆ ಪ್ರಯಾಣಿಸುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತು ಮತ್ತು ಅವರನ್ನು ಕಾಂಚೀಪುರಂನ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. 

ಆದರೆ ಅವರ ಸಾವಿನ ಬಗ್ಗೆ ಅನುಮಾನಗೊಂಡ ಮಸ್ತಾನ್ ಅವರ ಪುತ್ರ ಗುಡುವಂಚೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಎಫ್‌ಐಆರ್ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೇಹದ ಮೇಲಿನ ಗಾಯಗಳನ್ನು ಉಲ್ಲೇಖಿಸಿರುವುದರಿಂದ ಶಂಕಿತರನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಸ್ತಾನ್ ಅವರ ಕುಟುಂಬದ ಕೆಲವು ಸದಸ್ಯರೊಂದಿಗೆ ಹಣಕಾಸಿನ ತೊಂದರೆ ಇತ್ತು, ಅದು ಅವರ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.

"ಮಸ್ತಾನ್ ಅವರ ಸಹೋದರನ ಅಳಿಯ ಮತ್ತು ಇತರ ಕೆಲವರು ಈ ಹಿಂದೆ ನೀಡಿದ್ದ ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಂಸದೆ ಪ್ರಜ್ಞೆ ಕಳೆದುಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .

ಅಲ್ಲದೇ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈ ಸಂಸದರಾಗಿದ್ದ ಮಸ್ತಾನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಇಮ್ರಾನ್, ಸುಲ್ತಾನ್, ನಾಸೀರ್, ತೌಫೀಕ್ ಮತ್ತು ಚಾಲಕ ಲೋಕೇಶ್ ಅವರನ್ನು ಗುಡುವಂಚೇರಿ ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com