ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ಮೇಲೆ ಘೇಂಡಾಮೃಗ ದಾಳಿ; ಅಚ್ಚರಿಯ ರೀತಿಯಲ್ಲಿ ಪಾರು

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ಮೇಲೆ ಘೇಂಡಾಮೃಗ ದಾಳಿ; ಅಚ್ಚರಿಯ ರೀತಿಯಲ್ಲಿ ಪಾರು 
ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ಮೇಲೆ ಘೇಂಡಾಮೃಗ ದಾಳಿ
ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ಮೇಲೆ ಘೇಂಡಾಮೃಗ ದಾಳಿ

ಕಾಜಿರಂಗ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ಮೇಲೆ ಘೇಂಡಾಮೃಗ ದಾಳಿ; ಅಚ್ಚರಿಯ ರೀತಿಯಲ್ಲಿ ಪಾರು 

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ಮೇಲೆ ಘೇಂಡಾಮೃಗ ದಾಳಿ ನಡೆಸಿದ್ದು ಅಚ್ಚರಿಯ ರೀತಿಯಲ್ಲಿ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. 

ಮೂರು ಜೀಪ್ ಗಳಲ್ಲಿದ್ದ ಪ್ರವಾಸಿಗರ ಮೇಲೆ ಘೇಂಡಾಮೃಗ ದಾಳಿ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ರಾಷ್ಟ್ರೀಯ ಉದ್ಯಾನದ ಬಗೋರಿ ರೇಂಜ್ ನಲ್ಲಿ ಈ ಘಟನೆ ನಡೆದಿದ್ದು, ಹಿಂಬದಿಯ ಚಕ್ರಕ್ಕೆ ಹಾನಿ ಉಂಟುಮಾಡಿದೆ. ಘಟನೆಯಲ್ಲಿ ಯಾವುದೇ ಪ್ರವಾಸಿಗರಿಗೆ ಗಾಯಗಳಾಗಿಲ್ಲ. ಚಲಿಸುತ್ತಿದ್ದ ಜೀಪಿನ ಹಿಂಬದಿಯ ಚಕ್ರದ ಮೇಲೆ ಘೇಂಡಾಮೃಗದ ಹಲ್ಲಿನ ಗುರುತು ಪತ್ತೆಯಾಗಿದ್ದು, ಅಲ್ಲಿನ ಅಧಿಕಾರಿಗಳ ಪ್ರಕಾರ ಘೇಂಡಾಮೃಗದ ಬಾಯಿಗೆ ಗಾಯಗಳಾಗಿರುವ ಸಾಧ್ಯತೆ ಇದೆ.
 
ಘಟನೆಯ ವೀಡಿಯೋ ವೈರಲ್ ಆಗತೊಡಗಿದೆ. ಜೀಪ್ ನ ವಾಹನ ಚಾಲಕರು ತಾಳ್ಮೆಯಿಂದ ವಾಹನ ಮುನ್ನಡೆಸಿದ್ದು, ಪ್ರಮುಖ ಅನಾಹುತವೊಂದು ತಪ್ಪಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com