ಮುಂಬೈ: ಶಿಕ್ಷಣ ಸಚಿವರ ನಿವಾಸದೆದುರು ವಿದ್ಯಾರ್ಥಿಗಳ ಪ್ರತಿಭಟನೆಗೆ ಕುಮ್ಮಕ್ಕು; ಯೂಟ್ಯೂಬರ್ ‘ಹಿಂದೂಸ್ತಾನಿ ಭಾವು’ ಬಂಧನ
ವಿದ್ಯಾರ್ಥಿಗಳನ್ನು ಗಲಭೆಗೆ ಪ್ರಚೋದಿಸುವ ವೀಡಿಯೊವನ್ನು ವಿಕಾಸ್ ಫಾಟಕ್ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂದಿತ್ತು.
Published: 01st February 2022 01:20 PM | Last Updated: 01st February 2022 01:20 PM | A+A A-

'ಹಿಂದೂಸ್ತಾನಿ ಭಾವು' ವಿಕಾಸ್ ಫಾಟಕ್
ಮುಂಬೈ: ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಯೂಟ್ಯೂಬರ್ ‘ಹಿಂದೂಸ್ತಾನಿ ಭಾವು’ ಅಲಿಯಾಸ್ ವಿಕಾಸ್ ಫಾಟಕ್ ಅವರನ್ನು ಮುಂಬೈನ ಧಾರಾವಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೇರಳ: ದುಬಾರಿ ಬೆಲೆಯ ಹೈ ಎಂಡ್ ಬೈಕ್ ಇರುವ ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
10 ಮತ್ತು 12ನೇ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ ವಾಡ್ ಅವರ ನಿವಾಸದ ಬಳಿ ಜಮಾಯಿಸುವಂತೆ ವಿದ್ಯಾರ್ಥಿಗಳಿಗೆ ವಿಕಾಸ್ ಕರೆ ನೀಡಿದ್ದರು.
ಇದನ್ನೂ ಓದಿ: 'ವೆಲ್ ಕಮ್ ಟು ಕರ್ಮ ಕೆಫೆ' ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕಾಲೆಳೆದ ವೆಂಕಟೇಶ್ ಪ್ರಸಾದ್
ವಿಕಾಸ್ ಫಾಟಕ್ ವಿರುದ್ಧ ಧಾರಾವಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಗಲಭೆ, ಮಹಾರಾಷ್ಟ್ರ ಪೊಲೀಸ್ ಕಾಯಿದೆ, ವಿಪತ್ತು ನಿರ್ವಹಣಾ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: 'ಒಮಿಕ್ರಾನ್'ಗಿಂತ ಮೋದಿ ಬಳಸುವ ‘ಓ ಮಿತ್ರೋಂ’ ಪದ ತುಂಬಾ ಅಪಾಯಕಾರಿ: ಶಶಿ ತರೂರ್ ವ್ಯಂಗ್ಯ
ವಿಕಾಸ್ ಫಾಟಕ್ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ವಿದ್ಯಾರ್ಥಿಗಳನ್ನು ಗಲಭೆಗೆ ಪ್ರಚೋದಿಸುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂದಿತ್ತು.
ಇದನ್ನೂ ಓದಿ: ಮಣಿಪುರ ಚುನಾವಣೆ: ಜೆಡಿಯು ಅಭ್ಯರ್ಥಿಯಾಗಿ ಮಾಜಿ ಪೊಲೀಸ್ ಅಧಿಕಾರಿ ಬೃಂದಾ ಸ್ಪರ್ಧೆ