ಗೋವಾ ಚುನಾವಣೆ: ಭ್ರಷ್ಟಾಚಾರ, ಪಕ್ಷಾಂತರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣ ಪತ್ರಕ್ಕೆ ಆಪ್ ಅಭ್ಯರ್ಥಿಗಳ ಸಹಿ!
ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಎಲ್ಲಾ 40 ಅಭ್ಯರ್ಥಿಗಳು ಬುಧವಾರ ಅಫಿಡವಿಟ್‌ಗಳಿಗೆ ಸಹಿ ಹಾಕಿದ್ದು, ತಾವು ಭ್ರಷ್ಟಾಚಾರ ಅಥವಾ ಪಕ್ಷಾಂತರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
Published: 02nd February 2022 03:49 PM | Last Updated: 02nd February 2022 03:57 PM | A+A A-

ಗೋವಾ ಚುನಾವಣೆ
ಪಣಜಿ: ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಎಲ್ಲಾ 40 ಅಭ್ಯರ್ಥಿಗಳು ಬುಧವಾರ ಅಫಿಡವಿಟ್‌ಗಳಿಗೆ ಸಹಿ ಹಾಕಿದ್ದು, ತಾವು ಭ್ರಷ್ಟಾಚಾರ ಅಥವಾ ಪಕ್ಷಾಂತರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಹೌದು.. ಗೋವಾದ ರಾಜಕೀಯದ ದೊಡ್ಡ ಸಮಸ್ಯೆ ಎಂದರೆ ಅದು ಪಕ್ಷಾಂತರ. ಆದರೆ ಇದೇ ಪಕ್ಷಾಂತರ ಮಾಡುವುದಿಲ್ಲ ಎಂದು ಆಪ್ ಆಭ್ಯರ್ಥಿಗಳು ಪ್ರಮಾಣ ಪತ್ರಕ್ಕೆ ಸಹಿ ಹಾಕಿ ಪ್ರಮಾಣ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, 'ಜನರು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವ ಮುನ್ನವೇ ನಾವು ಪಕ್ಷಾಂತರ ಸಮಸ್ಯೆಯನ್ನು ಹೊರಹಾಕಲು ಬಯಸುತ್ತೇವೆ. ಹೀಗಾಗಿ ಅಲ್ಲಿ ಎಲ್ಲಾ 40 ಪಕ್ಷದ ನಾಮನಿರ್ದೇಶಿತರು ತಮ್ಮ ಅಫಿಡವಿಟ್‌ಗಳೊಂದಿಗೆ ಹಾಜರಿದ್ದರು. ಮತ್ತು ತಾವು ಭ್ರಷ್ಟಾಚಾರ ಅಥವಾ ಪಕ್ಷಾಂತರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕೇಜ್ರಿವಾಲ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳು ಅಫಿಡವಿಟ್ ಮೂಲಕ ಯಾವುದೇ ಭ್ರಷ್ಟ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಅಧಿಕಾರಾವಧಿಯಲ್ಲಿ (ಚುನಾಯಿತರಾದರೆ ಶಾಸಕರಾಗಿ) ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಬದಲಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಗೋವಾ ವಿಧಾನಸಭೆ ಚುನಾವಣೆ: ಆಪ್ ಸಿಎಂ ಅಭ್ಯರ್ಥಿಯಾಗಿ ವಕೀಲ ಅಮಿತ್ ಪಾಲೇಕರ್ ಆಯ್ಕೆ
ಅಫಿಡವಿಟ್ ಮಹತ್ವದ್ದಾಗಿದೆ, ಏಕೆಂದರೆ ಯಾವುದೇ ಎಎಪಿ ಅಭ್ಯರ್ಥಿಯು ಅದರ ಉಲ್ಲಂಘನೆಯು ನಂಬಿಕೆಯ ಕಾನೂನು ಉಲ್ಲಂಘನೆಯಾಗುತ್ತದೆ. ಅಭ್ಯರ್ಥಿಗಳು ತಮ್ಮ ಅಫಿಡವಿಟ್ ಗಳ ನಕಲು ಪ್ರತಿಗಳನ್ನು ಗೋವಾ ರಾಜ್ಯದ ಮತದಾರರಲ್ಲಿ ಪ್ರಸಾರ ಮಾಡುತ್ತಾರೆ ಎಂದು ಅವರು ಹೇಳಿದರು.
ಗೋವಾದಲ್ಲಿ ಪ್ರಾಮಾಣಿಕ ಸರ್ಕಾರವನ್ನು ನೀಡಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು ಎಎಪಿ ಸಂಚಾಲಕರು ಹೇಳಿದರು, ಇದಕ್ಕಾಗಿ ಪಕ್ಷಾಂತರಗಳನ್ನು ತಳ್ಳಿಹಾಕುವುದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಕೇಜ್ರಿವಾಲ್ ಅವರು ನಾಲ್ಕು ದಿನಗಳ ಕಾಲ ಗೋವಾ ರಾಜ್ಯಕ್ಕೆ ಭೇಟಿ ನೀಡಿದ್ದು, ಅವರ ಪಕ್ಷವು ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. 2017 ರ ಗೋವಾ ಚುನಾವಣೆಯಲ್ಲಿ, ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಎಎಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿತ್ತು.
ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಚುನಾವಣೆ ನಿಗದಿಯಾಗಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.