ಹಿಂದೂ ಎಂಬ ಕಾರಣಕ್ಕೆ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ತಿರಸ್ಕರಿಸಿದ್ರೂ: ಕಾಂಗ್ರೆಸ್ ಮುಖಂಡ
ಪಂಜಾಬ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಂಜಾಬ್ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಪೈಪೋಟಿ ಪಕ್ಷದೊಳಗೆ ಬಿರುಕು ಮೂಡಿಸಿದೆ. ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸರಗೊಂಡಿದ್ದಾರೆ.
Published: 02nd February 2022 07:58 PM | Last Updated: 02nd February 2022 08:00 PM | A+A A-

ಸುನೀಲ್ ಜಾಖರ್
ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಂಜಾಬ್ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಪೈಪೋಟಿ ಪಕ್ಷದೊಳಗೆ ಬಿರುಕು ಮೂಡಿಸಿದೆ. ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸರಗೊಂಡಿದ್ದಾರೆ.
ಹಿಂದು ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ತಿರಸ್ಕರಿಸಿರುವುದು ನೋವನ್ನುಂಟು ಮಾಡಿದೆ ಎಂದು ಮುಂಜಾನೆ ಸ್ಪರ್ಧೆಯಿಂದ ಉಚ್ಛಾಟಿತಗೊಂಡಿರುವ ಕಾಂಗ್ರೆಸ್ ಮುಖಂಡ ಸುನೀಲ್ ಜಾಖರ್ ಹೇಳಿದ್ದಾರೆ.
ಪಂಜಾಬ್ ಜಾತ್ಯತೀತ ರಾಜ್ಯ. ಆದರೆ ದೆಹಲಿಯಲ್ಲಿರುವ ಕಾಂಗ್ರೆಸ್ ಸಲಹೆಗಾರರು ಪಂಜಾಬ್ ಸಿಎಂ ಹುದ್ದೆಗೆ ಸಿಖ್ ಅಭ್ಯರ್ಥಿ ಸೂಕ್ತ ಎಂದು ಹೇಳಿರುವುದು ನನಗೆ ನೋವು ತಂದಿದೆ ಎಂದು ಜಾಖರ್ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಜನತೆ ಮೇಲೆ ಹೊಸ ತೆರಿಗೆ ಹೇರುವುದಿಲ್ಲ: ಕೇಜ್ರಿವಾಲ್
'ದೆಹಲಿಯಲ್ಲಿ ಸಲಹೆಗಾರರು ಸರಿಯಾದ ಸಲಹೆ ನೀಡುತ್ತಿಲ್ಲ. ನಾನು ಶಾಸಕನಾಗದ ಕಾರಣಕ್ಕೆ ಸಿಎಂ ಅಭ್ಯರ್ಥಿ ಮಾಡಲು ಆಗುವುದಿಲ್ಲ ಎಂದು ಹೇಳಿದರೆ ತಪ್ಪು ಎನಿಸುತ್ತಿರಲಿಲ್ಲ. ಆದರೆ ನಾನು ಪಂಜಾಬಿ ಹಿಂದೂ ಎಂಬ ಕಾರಣಕ್ಕಾಗಿ ತಿರಸ್ಕರಿಸಿರುವುದು ಸರಿಯಲ್ಲ ಅದರಿಂದ ನೀವು ಇಡೀ ಸಮುದಾಯವನ್ನು ಅಸಮಾಧಾನಗೊಳಿಸಿದ್ದೀರಿ ಎಂದು ಜಾಖರ್ ಹೇಳಿದ್ದಾರೆ.
ದಲಿತ ಅಭ್ಯರ್ಥಿಯನ್ನು ಬೆಂಬಲಿಸುವುದು ಉತ್ತಮ ಆಯ್ಕೆಯಾಗಿದ್ದರೆ ಪಕ್ಷವು ಅವರನ್ನು ಬೆಂಬಲಿಸಲಿ. ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆದಷ್ಟು ಬೇಗ ನಿರ್ಧರಿಸಬೇಕು ಎಂದು ಜಾಖರ್ ಹೇಳಿದರು.