ಪ್ರತಿ ಮದುವೆ ಹಿಂಸಾತ್ಮಕ, ಪ್ರತಿ ಪುರುಷ ಅತ್ಯಾಚಾರಿ ಎಂದು ಖಂಡಿಸುವುದು ಸರಿಯಲ್ಲ: ಸ್ಮೃತಿ ಇರಾನಿ
ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರ ಆದ್ಯತೆಯಾಗಿದೆ. ಆದರೆ ಪ್ರತಿ ಮದುವೆಯನ್ನು ಹಿಂಸಾತ್ಮಕ ಮತ್ತು ಪ್ರತಿಯೊಬ್ಬ ಪುರುಷ ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ...
Published: 02nd February 2022 07:41 PM | Last Updated: 02nd February 2022 07:41 PM | A+A A-

ಸ್ಮೃತಿ ಇರಾನಿ
ನವದೆಹಲಿ: ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರ ಆದ್ಯತೆಯಾಗಿದೆ. ಆದರೆ ಪ್ರತಿ ಮದುವೆಯನ್ನು ಹಿಂಸಾತ್ಮಕ ಮತ್ತು ಪ್ರತಿಯೊಬ್ಬ ಪುರುಷ ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಬುಧವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ವೈವಾಹಿಕ ಅತ್ಯಾಚಾರದ ಕುರಿತು ಸಿಪಿಐ ನಾಯಕ ಬಿನೋಯ್ ವಿಶ್ವಂ ಅವರ ಪೂರಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೌಟುಂಬಿಕ ಹಿಂಸಾಚಾರದ ವ್ಯಾಖ್ಯಾನದ ಕುರಿತು ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 3 ಮತ್ತು ಅತ್ಯಾಚಾರದ ಐಪಿಸಿಯ ಸೆಕ್ಷನ್ 375 ಅನ್ನು ಸರ್ಕಾರ ಗಮನಿಸಿದೆಯೇ ಎಂದು ಪ್ರಶ್ನಿಸಿದರು.
ಇದನ್ನು ಓದಿ: ತುಮಕೂರು: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ; ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ 20 ವರ್ಷ ಕಠಿಣ ಶಿಕ್ಷೆ
ಈ ದೇಶದ ಪ್ರತಿಯೊಂದು ಮದುವೆಯನ್ನು ಹಿಂಸಾತ್ಮಕ ಮದುವೆ ಎಂದು ಖಂಡಿಸುವುದು ಮತ್ತು ಈ ದೇಶದ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎನ್ನುವುದು ಸೂಕ್ತವಲ್ಲ ಎಂದು ನಾನು ಈ ಸದನದಲ್ಲಿ ಹೇಳುತ್ತೇನೆ ಎಂದು ಇರಾನಿ ತಿಳಿಸಿದರು.
ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ದೇಶದಲ್ಲಿನ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರಸ್ತುತ, ಭಾರತದಾದ್ಯಂತ 30ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಇದು 66 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿದೆ. ಇದಲ್ಲದೆ, 703 ‘ಒನ್ ಸ್ಟಾಪ್ ಕೇಂದ್ರಗಳು’ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐದು ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿವೆ ಎಂದು ಹೇಳಿದ ಅವರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.