ಕೋವಿಡ್ ಲಸಿಕೆಯಲ್ಲಿ ವಂಚನೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರ, ಹಾದಿತಪ್ಪಿಸುವ ಯತ್ನ: ಕೇಂದ್ರ ಸರ್ಕಾರ
ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದುಕೊಳ್ಳದ ಫಲಾನುಭವಿಗಳನ್ನು ಸಂಪೂರ್ಣ ಲಸಿಕೆ ಪಡೆದಿರುವುದಾಗಿ ನೋಂದಾಯಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ಹಾದಿ ತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
Published: 03rd February 2022 05:57 PM | Last Updated: 03rd February 2022 07:05 PM | A+A A-

ಆರೋಗ್ಯ ಕಾರ್ಯಕರ್ತೆಯೊಬ್ಬರು ಲಸಿಕೆ ಪಡೆಯುತ್ತಿರುವ ಚಿತ್ರ
ನವದೆಹಲಿ: ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದುಕೊಳ್ಳದ ಫಲಾನುಭವಿಗಳನ್ನು ಸಂಪೂರ್ಣ ಲಸಿಕೆ ಪಡೆದಿರುವುದಾಗಿ ನೋಂದಾಯಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ಹಾದಿ ತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ಎರಡೂ ಡೋಸ್ಗಳನ್ನು ಪಡೆದಿದ್ದರೂ ಜನರಿಗೆ ಸಂಪೂರ್ಣ ಲಸಿಕೆ ಹಾಕಿರುವಂತೆ ಮೋಸದಿಂದ ನೋಂದಾಯಿಸಲಾಗುತ್ತಿದೆ ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳಲ್ಲಿ ಹೇಳಲಾಗಿದೆ. ಲಸಿಕೆ ಪಡೆದಿರುವ ಜನರ ಅಂಕಿಸಂಖ್ಯೆಗಳನ್ನು ಸಹ ತಿರುಚಲಾಗಿದೆ ಎಂದು ಈ ವರದಿಗಳಲ್ಲಿ ಆರೋಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇಂತಹ ಮಾಧ್ಯಮಗಳ ವರದಿಗಳು ಯಾವುದೇ ಆಧಾರವಿಲ್ಲದೆ ಹಾದಿತಪ್ಪಿಸುವುದು ಮಾತ್ರವಲ್ಲದೇ, ಸಂಪೂರ್ಣವಾಗಿ ಸುಳ್ಳು ಮಾಹಿತಿವುಳ್ಳವಾಗಿವೆ. ಕೋವಿನ್ ಸಿಸ್ಟಮ್ ನಲ್ಲಿ ಆರೋಗ್ಯ ಕಾರ್ಯಕರ್ತರು ದಾಖಲಿಸಿರುವ ಮಾಹಿತಿಯ ಅರಿವು ವರದಿ ಪ್ರಕಟಿಸಿದ್ದವರಿಗೆ ಇದ್ದಂತೆ ಕಾಣುತ್ತಿಲ್ಲ. ಕೋವಿನ್ ಪೋರ್ಟಲ್ ನಲ್ಲಿ ದಾಖಲಾಗಿರುವ ಲಸಿಕಾ ಪ್ರಕ್ರಿಯೆನ್ನೂ ಕೂಡಾ ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ವಾರಣಾಸಿಯಲ್ಲಿ 4 ಕೋಟಿ ರೂ. ಮೌಲ್ಯದ ನಕಲಿ ಕೋವಿಶೀಲ್ಡ್ ಲಸಿಕೆ ತಯಾರಿಕೆ ಜಾಲ ಪತ್ತೆ: ಹೊರ ರಾಜ್ಯಗಳಿಗೂ ಪೂರೈಕೆ
ಎಲ್ಲಾ ಕೋವಿಡ್ ವ್ಯಾಕ್ಸಿನೇಷನ್ ಈ ಡಿಜಿಟಿಲ್ ವೇದಿಕೆಯಲ್ಲಿ ದಾಖಲಾಗುತ್ತಿರುತ್ತದೆ. ದೇಶಾದ್ಯಂತ ಇಂಟರ್ ನೆಂಟ್ ಲಭ್ಯತೆ ಮತ್ತು ಮೊಬೈಲ್ ನ ಸವಾಲುಗಳು ಮತ್ತು ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿನ್ ನಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ದಾಖಲಾಗುವ ಮುನ್ನ ಫಲಾನುಭವಿಗಳಿಗೆ ಹಲವು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದ ಎಂದು ತಿಳಿಸಿದೆ.
ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯಿದ್ದರೂ ಯಶಸ್ವಿಯಾಗಿ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 76ಕ್ಕೂ ಹೆಚ್ಚು ಮಂದಿ ಫಲಾನುಭವಿಗಳೊಂದಿಗೆ 167 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.